ಚಿಕ್ಕಮಗಳೂರು;ಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಕೊಡಗಿನ ಇಬ್ಬರು ಯುವಕರ ಮೃತದೇಹ ಪತ್ತೆ

Feb 15, 2026 - 19:35
 0  1.8k
ಚಿಕ್ಕಮಗಳೂರು;ಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಕೊಡಗಿನ ಇಬ್ಬರು ಯುವಕರ ಮೃತದೇಹ ಪತ್ತೆ

ಚಿಕ್ಕಮಗಳೂರು: ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದ ಇಬ್ಬರು ಯುವಕರ ಮೃತದೇಹ ಇಂದು ಪತ್ತೆಯಾಗಿದೆ‌. ಮೂಲತಃ ಕೊಡಗು ಜಿಲ್ಲೆಯ ಅಭಿಷೇಕ್ (27) ಹಾಗೂ ಯೋಗೀಶ್ (17) ಕಳಸದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.

 ಈ ವೇಳೆ ಕಳಸ ತಾಲೂಕಿನ ಬಾಳೆಹೊಳೆ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿ ಭದ್ರಾ ನದಿಯ ಆಳದ ಪರಿಚಯವಿಲ್ಲದ ಕಾರಣ ಇಬ್ಬರೂ ಸಾವನ್ನಪ್ಪಿದ್ದರು.

 ಪೊಲೀಸರು ಸಂಜೆವರೆಗೂ ಮೃತ ದೇಹ ಹುಡುಕಿ ಕತ್ತಲಾದ ಮೇಲೆ ಶೋಧ ಕಾರ್ಯ ನಿಲ್ಲಿಸಿದ್ದರು. ಇಂದು ಮತ್ತೆ ಪೊಲೀಸ್ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಇದು ತಜ್ಞರು ಶೋಧ ಕಾರ್ಯ ನಡೆಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಮೃತ ಅಭಿಷೇಕ್ ಅಕ್ಕ ಕಳಸಾದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಯುವಕರು ಕಳಸಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಮೃತ ದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 1
Sad Sad 10
Wow Wow 0