ಎಂ.ಬಾಡಗ ಅಂಗನವಾಡಿ ಕೇಂದ್ರದ ಪರಿಸರವನ್ನು ಸ್ವಚ್ಛಗೊಳಿಸಿದ ಪುಟಾಣಿಗಳು
admincoorgdaily
ಮಡಿಕೇರಿ: ಕಾಂತೂರು ಮೂರ್ನಾಡುವಿನ ಎಂ ಬಾಡಗ1 ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸ್ವಚ್ಛತೆ ಮಾಡುವ ಮೂಲಕ ಮಕ್ಕಳ ಗಮನವನ್ನು ಸೆಳೆಯಲಾಯಿತು. ಪ್ರತಿಯೊಬ್ಬ ಮಕ್ಕಳು ಸ್ವಚ್ಛತೆ ಮತ್ತು ಸುತ್ತಮುತ್ತಲಿನ ಪರಿಸರದ ಬಗ್ಗೆ ಹಾಗೂ ತಮ್ಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅವರ ಕೈಯಿಂದಲೇ ಶ್ರಮದಾನವನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಳ್ಳಲಾಯಿತು. ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿಬಿ, ಮತ್ತು ಎಂ ಬಾಡಗ 1 ಎಲ್ಕೆಜಿ ಅಂಗನವಾಡಿ ಕೇಂದ್ರದ ಮಕ್ಕಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.