ಅಮ್ಮನಿಗಾಗಿ ಕಣ್ಣೀರಿಟ್ಟ ಪುಟಾಣಿಗಳು; ವೀಡಿಯೋ ವೈರಲ್ ನನ್ನ ಅಮ್ಮನಿಗೆ ಫೋನ್ ಮಾಡಿ, ಅಮ್ಮನ ಹೆಸರು ಮಮ್ಮಾ
admincoorgdaily

ಬೆಂಗಳೂರು: ಶಾಲೆಯ ತರಗತಿ ಕಿಟಕಿಯಲ್ಲಿ ನಿಂತುಕೊಂಡು ಅಮ್ಮನಿಗಾಗಿ ಕಣ್ಣೀರಿಟ್ಟ ಪುಟ್ಟ ಮಕ್ಕಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ನರ್ಸರಿ ಹಾಗೂ ಎಲ್‌ಕೆಜಿ ತರಗತಿಗಳಲ್ಲಿ ಮಕ್ಕಳು ಎದುರಿಸುವ ಮಾನಸಿಕ ಒತ್ತಡದ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
ಎಕ್ಸ್‌ಖಾತೆಯಲ್ಲಿ ಸುರಾಜ್ ಕುಮಾರ್ ಬೌದ್ ಹಂಚಿಕೊಂಡಿರುವ ವೀಡಿಯೋದಲ್ಲಿ, ಎರಡು-ಮೂರು ವರ್ಷದ ಮಕ್ಕಳು ತರಗತಿಯೊಳಗೆ ಅಳುತ್ತಾ “ನನ್ನಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಮಮ್ಮಾ” ಎಂದು ಶಿಕ್ಷಕರಿಗೆ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ. ಮತ್ತೊಂದು ಮಗು ಅಮ್ಮ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿ ತರಗತಿ ಕಿಟಕಿಯಿಂದ ಹೊರಗೆ ನೋಡುವ ದೃಶ್ಯ ಹೃದಯ ಕಲುಕುವಂತಿದೆ.
ವೀಡಿಯೋ ಜೊತೆಗೆ, “ಎಲ್‌ಕೆಜಿ ಹೆಸರಿನಲ್ಲಿ ಇಷ್ಟು ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಶಿಕ್ಷಣವಲ್ಲ; ಇದು ಮಕ್ಕಳ ಬಾಲ್ಯವನ್ನೇ ಕಸಿಯುತ್ತಿದೆ” ಎಂದು ಬೌದ್ ಟೀಕಿಸಿದ್ದಾರೆ.
Childhood cuteness overloaded! 😍
— Suraj Kumar Bauddh (@SurajKrBauddh) December 1, 2025
Kids in school are requesting their teacher ma'am to let them go home as they want to lie in their mother's lap and have milk.
Sending 2–3 year-old kids to school in the name of LKG is not education.
This is the theft of childhood innocence.💔 pic.twitter.com/3jnLGHeXxo
ಈ ವೀಡಿಯೋ ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಅನೇಕರು ಪ್ರತಿಕ್ರಿಯೆ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಆಘಾತಕಾರಿ”, “ತಾಯಿಯಿಂದ ದೂರ ಮಾಡುವ ಶಿಕ್ಷಣ ಪದ್ಧತಿ ಮಾನವೀಯವಲ್ಲ” ಎಂಬ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗಿವೆ.
ಪುಟ್ಟ ಮಕ್ಕಳ ಅಳುವಿನ ಈ ದೃಶ್ಯ, ಶಾಲೆಗಳಿಗೆ ಪ್ರವೇಶ ವಯಸ್ಸಿನ ಮಿತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.