ಕಾಡಾನೆ ದಾಳಿಯಿಂದ ಪಾರಾದ ಮಕ್ಕಳು:ಶಾಲೆ ಬಿಟ್ಟು ಮನೆಗೆ ಹೋಗುವಾಗ ರಸ್ತೆಯಲ್ಲಿ ಆನೆ
ಸಿದ್ದಾಪುರ: ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ರಸ್ತೆಯಲ್ಲಿ ಗುರುವಾರ ಸಂಜೆ ಮೂರು ಕಾಡಾನೆಗಳನ್ನು ಕಂಡು ಭಯಭೀತರಾದ ಶಾಲಾ ಮಕ್ಕಳು, ರಸ್ತೆ ಬದಿಯ ಕಟ್ಟಡದಲ್ಲಿ ಕುಳಿತುಕೊಂಡು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಶಾಲೆ ಸಮೀಪದ ಕಾಫಿ ತೋಟದಲ್ಲಿ ಮರಿಯಾನೆ ಸೇರಿದಂತೆ ಮೂರು ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಸಂದರ್ಭದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಮಕ್ಕಳು ಆನೆಗಳನ್ನು ಕಂಡು ಭಯಭೀತರಾಗಿ ರಸ್ತೆ ಬದಿಯ ಕಟ್ಟಡಕ್ಕೆ ಓಡಿಹೋಗಿ ಅಪಾಯದಿಂದ ತಪ್ಪಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳು ಬಳಿಕ ಮತ್ತೆ ಕಾಫಿ ತೋಟದೊಳಗೆ ತೆರಳಿದ ನಂತರ ಮಕ್ಕಳು ಮನೆಗೆ ತೆರಳಿದರು ಎನ್ನಲಾಗಿದೆ.
What's Your Reaction?
Like
3
Dislike
0
Love
0
Funny
1
Angry
0
Sad
3
Wow
0
