ಸೆ. 30 ರಂದು ಮಡಿಕೇರಿಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಮಕ್ಕಳ ದಸರಾ: ಅತ್ಯಧಿಕ ಸ್ಪಧಿ೯ಗಳಿಂದ ನೋಂದಣಿ

ಸೆ. 30 ರಂದು ಮಡಿಕೇರಿಯಲ್ಲಿ ಮಿಸ್ಟಿ ಹಿಲ್ಸ್ ನಿಂದ  ಮಕ್ಕಳ ದಸರಾ: ಅತ್ಯಧಿಕ ಸ್ಪಧಿ೯ಗಳಿಂದ ನೋಂದಣಿ

ಮಡಿಕೇರಿ:ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಗಾಂಧ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ 12 ನೇ ವಷ೯ದ ಮಕ್ಕಳ ದಸರಾ ಆಯೋಜಿತವಾಗಿದೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.

 ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಸಹಯೋಗದಲ್ಲಿ ಸೆ.30 ರಂದು ಮಂಗಳವಾರ ಬೆಳಗ್ಗೆ 9 ಗಂಟೆಯಿಂದಲೇ ಗಾಂಧಿ ಮೈದಾನದಲ್ಲಿ ಮಕ್ಕಳಿಗಾಗಿ ಮಕ್ಕಳ ಅಂಗಡಿ, ಸಂತೆ. ಮಂಟಪ , ಛದ್ಮವೇಷ ಕ್ಲೇ ಮಾಡೆಲಿಂಗ್ ಸ್ಪಧೆ೯ಗಳು ಆಯೋಜಿಸಲ್ಪಟ್ಟಿವೆ.

 ಜಿಲ್ಲಾದಿಕಾರಿ ವೆಂಕಟರಾಜಾ ಮಕ್ಕಳ ದಸರಾ ಉದ್ಘಾಟಿಸಲಿದ್ದು, ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ , ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಈ ವಷ೯ ಅತ್ಯಧಿಕ ಸಂಖ್ಯೆಯಲ್ಲಿ ಸ್ಪಧಿ೯ಗಳು ಮಕ್ಕಳ ದಸರಾಕ್ಕೆ ನೋಂದಣಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸ್ಪಧೆ೯ಗಳನ್ನು ಬೆಳಗ್ಗೆ 9 ಗಂಟೆಗೇ ಪ್ರಾರಂಭಿಸಲಾಗುತ್ತದೆ ಎಂದೂ ಅನಿಲ್ ಮಾಹಿತಿ ನೀಡಿದ್ದಾರೆ.