ಸ್ವಚ್ಛ ಕೊಡಗು-ಸುಂದರ ಕೊಡಗು:ಬೇಗೂರು, ಮಾಪಿಳತೋಡುವಿನಲ್ಲಿ ಸ್ವಚ್ಛತಾ ಕಾರ್ಯ

ಸ್ವಚ್ಛ ಕೊಡಗು-ಸುಂದರ ಕೊಡಗು:ಬೇಗೂರು, ಮಾಪಿಳತೋಡುವಿನಲ್ಲಿ ಸ್ವಚ್ಛತಾ ಕಾರ್ಯ

ಪೊನ್ನಂಪೇಟೆ:"ಸ್ವಚ್ಛ ಕೊಡಗು ಸುಂದರ ಕೊಡಗು" ಅಭಿಯಾನದ ಅಂಗವಾಗಿ ಬೇಗೂರು ಮಾಪಿಳತೋಡು ಗ್ರಾಮದ ಸಾರ್ವಜನಿಕರು ಇಂದು ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದರು. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯನಡೆಯಿತು. ಗ್ರಾಮದ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಶುದ್ಧಗೊಳಿಸುವ ಮೂಲಕ ಗ್ರಾಮಸ್ಥರು ಮಾದರಿ ಪ್ರದರ್ಶಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.