ಸ್ವಚ್ಛ ಕೊಡಗು-ಸುಂದರ-ಕೊಡಗು:ಮಡಿಕೇರಿ ಬದ್ರಿಯಾ ಮಸೀದಿ ವತಿಯಿಂದ ಸ್ವಚ್ಛತಾ ಕಾರ್ಯ

ಸ್ವಚ್ಛ ಕೊಡಗು-ಸುಂದರ-ಕೊಡಗು:ಮಡಿಕೇರಿ ಬದ್ರಿಯಾ ಮಸೀದಿ ವತಿಯಿಂದ ಸ್ವಚ್ಛತಾ ಕಾರ್ಯ

" ಮಡಿಕೇರಿ: ಸ್ವಚ್ಚ ಕೊಡಗು - ಸುಂದರ ಕೊಡಗು ಅಭಿಯಾನದ ಭಾಗವಾಗಿ ಇಂದು ಬದ್ರಿಯಾ ಮಸೀದಿ ಮಡಿಕೇರಿ ವತಿಯಿಂದ ಗಣಪತಿ ಬೀದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬದ್ರಿಯಾ ಮಸೀದಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಅಮೀನ್ ಮೋಹಿಸಿನ್, ಉಪಾಧ್ಯಕ್ಷ ಇಸ್ಮಾಯಿಲ್, ಜೂಮ್ ಬೈಕ್ ಉದ್ಯಮಿ ಶರೀಫ್, ರಫೀಕ್, ಹುರೈರಾ, ಉಮಾರ್, ಹನೀಫ್ ಫೈಜಿ, ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದರು .