ಸ್ವಚ್ಚ ಕೊಡಗು - ಸುಂದರ ಕೊಡಗು ಸ್ವಚ್ಚತಾ ಅಭಿಯಾನಕ್ಕೆ ನಾಳೆ ಬೆಳಗ್ಗೆ ಮಡಿಕೇರಿಯಲ್ಲಿ ಚಾಲನೆ
ಮಡಿಕೇರಿ:ಕೂಗ್೯ ಹೋಟೆಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ನಾಳೆ ಬುಧವಾರ ಬೆಳಗ್ಗೆ 8 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಸ್ವಚ್ಚ ಕೊಡಗು - ಸುಂದರ ಕೊಡಗು ಸ್ವಚ್ಚತಾ ಅಭಿಯಾನಕ್ಕೆ ಶಾಸಕರಾದ ಡಾ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮದ್ ಸೇರಿದಂತೆ ಪ್ರಮುಖರು ಚಾಲನೆ ನೀಡಲಿದ್ದಾರೆ. ಈ ಸ್ವಚ್ಚತಾ ಅಭಿಯಾನ ನಾಳೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಆಯೋಜಿತವಾಗಿದ್ದು ಕೊಡಗಿನಲ್ಲಿ ಮೊದಲ ಬಾರಿಗೆ ಬೖಹತ್ ಪ್ರಮಾಣದ ಸ್ವಚ್ಚತಾ ಆಂದೋಲನ ನಡೆಯಲಿದೆ.