ಕೊಡಗಿನ ಮೂವರು ರೌಡಿಶೀಟರ್ ಗಳ ವಿರುದ್ಧ ಕೋಕಾ ಆಕ್ಟ್

Jun 17, 2026 - 13:45
 0  2k
ಕೊಡಗಿನ ಮೂವರು  ರೌಡಿಶೀಟರ್ ಗಳ ವಿರುದ್ಧ ಕೋಕಾ ಆಕ್ಟ್

ಮಡಿಕೇರಿ:ಜಿಲ್ಲೆಯಲ್ಲಿ ನಿರಂತರವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ವಿರುದ್ದ ಪ್ರಥಮ ಬಾರಿಗೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ 2000ದ(ಕೋಕಾ) ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪ್ರಮೋದ್ ಅಲಿಲಿಯಾಸ್ ಡಿಸ್ಕ್, ದರ್ಶನ್ ಅಲಿಯಾಸ್ ಗಿಲ್ಲಿ ಎಂಬುವವರ ಮೇಲೆ ಮೊದಲ ಬಾರಿಗೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ 2000ದ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಮೋದ್ ವಿರುದ್ಧ 18 ಪ್ರಕರಣಗಳಿದ್ದರೆ, ದರ್ಶನ್ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು 9 ಪ್ರಕರಣಗಳಲ್ಲಿ ಒಟ್ಟಿಗೆ ಆರೋಪಿಗಳಾಗಿದ್ದಾರೆ. ಇತ್ತೀಚೆಗೆ ಮತ್ತೊಂದು ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದ ಹಿನ್ನೆಲೆ ಕೋಕಾ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ,'' ಎಂದು ತಿಳಿಸಿದರು.

'ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶರೀಫ್ ಅಲಿಯಾಸ್ ಬಿಲಾಲ್ ಎಂಬ ರೌಡಿಶೀಟರ್ ಮೇಲೆಯೂ ಇದೇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನ ಮೇಲೆ ಒಟ್ಟು 11 ಪ್ರಕರಣಗಳಿದ್ದು, ಇತ್ತೀಚೆಗೆ ನಿರಂತರವಾಗಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ,'' ಎಂದು ಮಾಹಿತಿ ನೀಡಿದ್ದಾರೆ.

What's Your Reaction?

Like Like 1
Dislike Dislike 1
Love Love 2
Funny Funny 0
Angry Angry 0
Sad Sad 0
Wow Wow 0