ದಿವಂಗತ ಪೊನ್ನಮ್ಮ ಸುಬ್ಬಯ್ಯರವರ 10ನೇ ವರ್ಷದ ಪುಣ್ಯಸ್ಮರಣೆ

Jan 3, 2026 - 14:32
Jan 3, 2026 - 16:37
 0  452
ದಿವಂಗತ ಪೊನ್ನಮ್ಮ ಸುಬ್ಬಯ್ಯರವರ 10ನೇ ವರ್ಷದ ಪುಣ್ಯಸ್ಮರಣೆ

ಪೊನ್ನಂಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ತಮ್ಮ ಮಾತೃಶ್ರೀರವರಾದ ದಿವಂಗತ ಪೊನ್ನಮ್ಮ ಸುಬ್ಬಯ್ಯ ರವರ 10ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಇಂದು ಪಾಲ್ಗೊಂಡರು.

 ಮೊದಲಿಗೆ ದಿವಂಗತ ಮಾತೃಶ್ರೀ ರವರ ದಿವ್ಯ ಸಮಾಧಿಗೆ ಪೂಜಾನಮನ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ಬಳಿಕ ಶಾಸಕ ಸಹೋದರರ ತಂದೆಯವರಾದ ದಿವಂಗತ ಎ.ಕೆ ಸುಬ್ಬಯ್ಯ ರವರ ಸಮಾಧಿಗೂ ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಜೇಷ್ಠ ಸಹೋದರ ದಂಪತಿಗಳಾದ ನರೇನ್ ಕಾರ್ಯಪ್ಪ ಹಾಗೂ ಚಂದಲೇ ಕಾರ್ಯಪ್ಪ, ಸಹೋದರ ರವಿ ಸೋಮಯ್ಯ , ಶಾಸಕರ ದೊಡ್ಡಮ್ಮ ಶ್ರೀಮತಿ ಗಂಗಮ್ಮ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಅಣ್ಣಳಮಾಡ ಹರೀಶ್, ಭವೀನ್, ಇಸ್ಮಾಯಿಲ್, ಆಂಟೋನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0