Kodagu

ನಲ್ಲೂರು ಸೇತುವೆ ಬಳಿ ಕಾಂಕ್ರೀಟ್ ರಸ್ತೆ ಕಾಮಗಾರಿ: ತಿಂಗಳ ಕೊನೆವರೆಗೆ ಸಂಚಾರ ಬಂದ್

admincoorgdaily

ನಲ್ಲೂರು ಸೇತುವೆ ಬಳಿ ಕಾಂಕ್ರೀಟ್ ರಸ್ತೆ ಕಾಮಗಾರಿ: ತಿಂಗಳ ಕೊನೆವರೆಗೆ ಸಂಚಾರ ಬಂದ್

ಪೊನ್ನಂಪೇಟೆ, ಆ.8: ಪೊನ್ನಂಪೇಟೆ ತಾಲೂಕು ನಲ್ಲೂರು ಗ್ರಾಮದ ಸೇತುವೆ ಬಳಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ, ನಲ್ಲೂರು ಸೇತುವೆಯಿಂದ ನಲ್ಲೂರು ಶಾಲೆಯವರೆಗೆ ರಸ್ತೆಯಲ್ಲಿ ಈ ತಿಂಗಳ ಕೊನೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

 ಈ ಹಿನ್ನೆಲೆಯಲ್ಲಿ ಪೊನ್ನಪ್ಪಸಂತೆಯಿಂದ ಪೊನ್ನಂಪೇಟೆಗೆ ತೆರಳುವ ವಾಹನಗಳು ನಲ್ಲೂರು ಶಾಲೆಯ ಬಳಿಯಿಂದ ಬೆಸಗೂರು ಮಾರ್ಗವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಅದೇ ರೀತಿ, ಪೊನ್ನಂಪೇಟೆಯಿಂದ ಪೊನ್ನಪ್ಪಸಂತೆ ಹಾಗೂ ಬಾಳೆಲೆಗೆ ತೆರಳುವ ವಾಹನಗಳು ಬಲ್ಯಮುಂಡೂರು–ಬೆಸಗೂರು ಮಾರ್ಗದ ಮೂಲಕ ಸಂಚರಿಸುವಂತೆ ತಿಳಿಸಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸಹಕರಿಸುವಂತೆ ಸಂಬಂಧಪಟ್ಟವರು ಮನವಿ ಮಾಡಿದ್ದಾರೆ.