Kodagu

ಕಕ್ಕಬ್ಬೆ: ಚರಂಡಿಗೆ ಬಿದ್ದ ಕೋಳಿ ಮಾಂಸ ಸಾಗಾಟ ಮಾಡುತ್ತಿದ್ದ ಕಂಟೇನರ್

admincoorgdaily

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕಕ್ಕಬ್ಬೆ ಬಳಿಯ ಕಬ್ಬಿನಕಾಡಿನಿಂದ ತಾಮರ ರೆಸಾರ್ಟ್ ಗೆ ತೆರಳುವ ರಸ್ತೆಬದಿಯ ಚರಂಡಿಗೆ ಕಂಟೇನರ್ ಬಿದ್ದ ಪರಿಣಾಮ ಸಂಚಾರಕ್ಕೆ ತೊಡಕುಂಟಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ತಾಮರ ರೆಸಾರ್ಟಿಗೆ ಮಂಗಳೂರು ನೋಂದಣಿಯ ಕಂಟೇನರ್ ನಲ್ಲಿ ಕೋಳಿ ಮಾಂಸವನ್ನು ಕೊಂಡೊಯ್ಯುತ್ತಿದ್ದಾಗ ರೆಸಾರ್ಟಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಎದುರಿನಿಂಸ ಬಂದ ವಾಹನಕ್ಕೆ ದಾರಿ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಇದರಿಂದ ಈ ರಸ್ತೆಗಾಗಿ ಲಘು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.ಕಂಟೇನರ್ ಚರಂಡಿಗೆ ಬಿದ್ದು ಪಕ್ಕದತೋಟದ ಬರೆಗೆ ವಾಲಿ ನಿಂತಿದ್ದು ಚಾಲಕ ಹಾಗೂ ವಾಹನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.