ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹಲವೆಡೆ ಪ್ರವಾಸಿ ತಾಣಗಳ ಮಾಹಿತಿ ಫಲಕಗಳ ಅಳವಡಿಕೆ

ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹಲವೆಡೆ ಪ್ರವಾಸಿ ತಾಣಗಳ ಮಾಹಿತಿ ಫಲಕಗಳ ಅಳವಡಿಕೆ

ಮಡಿಕೇರಿ- ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹಲವೆಡೆ ಪ್ರವಾಸಿ ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸುವ ಯೋಜನೆಗೆ ರಾಜಾಸೀಟ್ ಹೊರಬದಿಯಲ್ಲಿ ಫಲಕ ಅನಾವರಣಗೊಳಿಸುವ ಮೂಲಕ ಚಾಲನೆ ದೊರಕಿದೆ.

 ನಗರದ ಹೆಸರಾಂತ ಪ್ರವಾಸಿ ತಾಣ ರಾಜಾಸೀಟ್ ನಲ್ಲಿ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರಾಜಾಸೀಟ್ ನಿಂದ ಇರುವ ದೂರದ ಮಾಹಿತಿಯುಳ್ಳ ಬೖಹತ್ ಹೋಡಿ೯ಂಗ್ ನ್ನು ಅನಾವರಣಗೊಳಿಸಲಾಯಿತು. ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ, ಪ್ರಧಾನ ಕಾಯ೯ದಶಿ೯ ನಾಸೀರ್, ನಗರಸಭೆಯ ಪೌರಾಯುಕ್ತ ರಮೇಶ್ ಹಾಜರಿದ್ದರು. ಇಂಥ ಮಾಹಿತಿ ಫಲಕಗಳನ್ನು ಪ್ರವಾಸಿಗರ ಅನುಕೂಲತೆಗಾಗಿ ಜಿಲ್ಲೆಯ 12 ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಳವಡಿಸಲಾಗುತ್ತಿದ್ದು, ಆಯಾ ಪ್ರವಾಸಿ ತಾಣದಿಂದ ಬೇರೆ ಕಡೆಗಳಲ್ಲಿನ ಪ್ರವಾಸಿ ತಾಣಕ್ಕೆ ಎಷ್ಟು ದೂರವಾಗಲಿದೆ. ಆ ಪ್ರವಾಸಿ ತಾಣದ ವಿಶೇಷ ಏನೆಂಬ ಮಾಹಿತಿ ಈ ಹೋಡಿ೯ಂಗ್ ನಲ್ಲಿರಲಿದೆ ಎಂದು ದಿನೇಶ್ ಕಾಯ೯ಪ್ಪ ಮಾಹಿತಿ ನೀಡಿದರು.