ಇರಾನ್‌ಗೆ ತೆರಳಲಾಗದೆ ಕೊಡಗಿನಲ್ಲಿ ಸಿಲುಕಿದ ದಂಪತಿಗಳು
ಮಡಿಕೇರಿ;-ಇರಾನ್-ಅಮೆರಿಕಾ, ಇಸ್ರೇಲ್ ವಾರ್ ಎಫೆಕ್ಟ್ ನಿಂದಾಗಿ ಒಂದಲ್ಲ ಒಂದು ರೀತಿಯಲ್ಲಿ ಹಲವಾರು ಉದ್ಯಮಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.ಈ ನಡುವೆ ಇರಾನ್ ನಿಂದ ದಂಪತಿಗಳು ದೀರ್ಘವಾದಿ ರಜೆ ಹಾಕಿಕೊಂಡು ತಮ್ಮ ಮಕ್ಕಳನ್ನು ಇರಾನ್ ದೇಶದಲ್ಲೇ ಬಿಟ್ಟು ಬಂದಿದ್ದಾರೆ.ಇದೀಗಾ ಇರಾನ್ ದೇಶಕ್ಕೆ ತೆರಳು ಸಾಧ್ಯವಾಗದೆ, ಯುದ್ಧದ ಪರಿಣಾಮದಿಂದ ವಿಮಾನ ರದ್ದಾಗಿದೆ.
ಈ ನಡುವೆ ಇದೀಗಾ ಈ ದಂಪತಿಗಳಿಗೆ ಪಾಸ್‌ಪೋರ್ಟ್ ಅವಧಿ ಮುಕ್ತಾಯಗೊಂಡು ಎಲ್ಲಿ ಇರಾನ್ ದೇಶಕ್ಕೆ ಹೋಗಲು ಸಾಧ್ಯವಾಗಲ್ಲೋ ಅನ್ನೋ ಆತಂಕ ಈ ದಂಪತಿಗಳಿಗೆ ಕಾಡುತ್ತಿದೆ.
ಕೊಡಗಿನ ಮಹಿಳೆ ಹಾಗೂ ಇರಾನಿನ ಪತಿಯೊಬ್ಬರ ದಂಪತಿ ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ಗೆ ಮರಳಲಾಗದೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಉಳಿಯುವಂತಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯುಪ್ರದೇಶ ಬಂದ್ ಆಗಿದ್ದು, ವಿಮಾನ ಸಂಚರವೂ ಭಾರೀ ಅಸ್ತವ್ಯಸ್ತಗೊಂಡಿದೆ. ಕೊಡಗಿನ ಶ್ರೀಮತಿ ನವೀನ್ ಅವರು ಸುಮಾರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇರಾನಿನ ಪ್ರಜೆ ನಾದರ್ ಅವರೊಂದಿಗೆ ಪರಿಚಯವಾಗಿ ಬಳಿಕ ವಿವಾಹವಾಗಿದ್ದರು.
ವಿವಾಹದ ನಂತರ ದಂಪತಿ ಇರಾನಿನ ಬೋಜ್‌ನೂರ್ ಪ್ರದೇಶದಲ್ಲಿ ನೆಲೆಸಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನು ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುವ ಈ ದಂಪತಿ, ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು. ಈ ಬಾರಿ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದ ಇವರು ಮಾರ್ಚ್ 16ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕಾ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದುಪಡಿಸಲಾಯಿತು. ನಂತರ ಏಪ್ರಿಲ್ 15ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರೂ, ಆ ವಿಮಾನವೂ ರದ್ದಾಗಿದೆ.
ಇರಾನ್‌ಗೆ ತೆರಳುವಲ್ಲಿ ಇನ್ನಷ್ಟು ವಿಳಂಬವಾದರೆ ಮೇ ತಿಂಗಳಲ್ಲಿ ಇವರ ಪಾಸ್‌ಪೋರ್ಟ್ ಅವಧಿ ಮುಗಿಯುವ ಆತಂಕವೂ ಎದುರಾಗಿದೆ.ಇದಕ್ಕೂ ಮೀರಿಸಿ, ಯುದ್ಧ ಪರಿಸ್ಥಿತಿಯಿಂದ ಇರಾನಿನಲ್ಲಿ ಇಂಟರ್‌ನೆಟ್ ಸೇವೆಗಳು ಬಹುತೇಕ ಸ್ಥಗಿತಗೊಂಡಿರುವುದರಿಂದ ಅಲ್ಲಿ ಇರುವ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲವೆಂದು ನವೀನ್ ಹಾಗೂ ನಾದರ್ ದಂಪತಿ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಇರಾನಿನಲ್ಲಿ ಇಂಟರ್‌ನೆಟ್ ಸಂಪರ್ಕ ತೀವ್ರವಾಗಿ ಕುಸಿದಿರುವ ವರದಿಗಳೂ ಹೊರಬಿದ್ದಿವೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ತಮ್ಮ ವ್ಯವಹಾರ, ಕುಟುಂಬ ಹಾಗೂ ಪ್ರಯಾಣ ಯೋಜನೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ ಎಂದು ದಂಪತಿ ನೋವು ವ್ಯಕ್ತಪಡಿಸಿದ್ದಾರೆ.ಅಲ್ಲದೆ ಈ ದಂಪತಿಗಳ ನೋವಿಗೆ ಮನೆಯ ಕುಟುಂಬಸ್ಥರು ದೈರ್ಯ ತುಂಬುವ ಕೆಲಸ ಮಾಡಿಕೊಂಡು ಇದ್ದಾರೆ ಅಲ್ಲದೇ ಈ ಯುದ್ದ ಅದಷ್ಟು ಬೇಗಾ ಮುಗಿಯಲ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇರಾನ್ ಇಸ್ರೇಲ್ ವಾರ್ ಎಪೇಕ್ಟ್ ದಿನದಿಂದ ದಿನಕ್ಕೆ ಅದರ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಮಹಿಳೆ ಹಾಗೂ ಇರಾನಿನ ಪತಿಯೊಬ್ಬರ ದಂಪತಿ ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ಗೆ ಮರಳ ಲಾಗದೆ ಇದೀಗಾ ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ರದ್ದು ಅಗುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ
