ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ಗೆಲುವು ಸಾಧಿಸಿದ ತಂಡಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ಗೆಲುವು ಸಾಧಿಸಿದ ತಂಡಗಳು

ಮಡಿಕೇರಿ ಏ.15 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.15 ರಂದು ಗೆಲುವು ಸಾಧಿಸಿದ ತಂಡಗಳು.

ಮೈದಾನ 1;

ಮುಕ್ಕಾಟಿರ (ಕುಂಬಳದಾಳು) ಮತ್ತು ಕಲ್ಲುಮಾಡಂಡ (ಚೇರಂಬಾಣೆ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 49 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 96 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನತ್ತಿದ ಕಲ್ಲುಮಾಡಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಮಾತ್ರ ಸೇರಿಸಿ ಸೋಲೊಪ್ಪಿಕೊಂಡಿತು.

ಚೋವಂಡ ಮತ್ತು ಮೊಣ್ಣಂಡ ನಡುವಿನ ಪಂದ್ಯದಲ್ಲಿ ಮೊಣ್ಣಂಡ ತಂಡಕ್ಕೆ 9 ರನ್ ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೊಣ್ಣಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿತು. ಚೋವಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 70 ರನ್ ಗಳನ್ನು ಗಳಿಸಿ ಸೋಲು ಕಂಡಿತು.

ಅಪ್ಪುಡ ಮತ್ತು ತೀತರಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಅಪ್ಪುಡ 7 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪುಡ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿತು. ತೀತರಮಾಡ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 67 ರನ್ ಗಳನ್ನು ಸೇರಿಸಿ ಸೋಲಿಗೆ ಶರಣಾಯಿತು.

ಬಡುಮಂಡ ಮತ್ತು ಕಬ್ಬಚ್ಚಿರ ನಡುವಿನ ಪಂದ್ಯದಲ್ಲಿ ಬಡುಮಂಡ ತಂಡ 16 ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಡುಮಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿತು. ಕಬ್ಬಚ್ಚಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 58 ರನ್ ಗಳನ್ನು ಸೇರಿಸಿ ಸೋಲು ಕಂಡಿತು.

ಪೊನ್ನಿಮಾಡ ಮತ್ತು ಚೆಂಬoಡ ನಡುವಿನ ಪಂದ್ಯದಲ್ಲಿ ಪೊನ್ನಿಮಾಡ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆಂಬಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನು ಸೇರಿಸಿತು. ಪೊನ್ನಿಮಾಡ 2.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಗಳಿಸಿ ಗೆಲುವಿನ ನಗು ಬೀರಿತು.

ಚೊಟ್ಟೆಯಂಡಮಾಡ ಮತ್ತು ಮಲ್ಲಂಗಡ ತಂಡಗಳ ನಡುವಿನ ಹಣಾಹಣಿಯಲ್ಲಿ ಚೊಟ್ಟೆಯಂಡಮಾಡ 50 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೊಟ್ಟೆಯಂಡಮಾಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 93 ರನ್ ಗಳನ್ನು ಗಳಿಸಿತು. ಮಲ್ಲಂಗಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.

ಅಯ್ಯಕುಟ್ಟಿರ ಮತ್ತು ಮುಂಡ್ಯೋಳoಡ ನಡುವಿನ ಪಂದ್ಯದಲ್ಲಿ ಮುಂಡ್ಯೋಳoಡ ತಂಡ 43 ರನ್ ಗಳ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡ್ಯೋಳoಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 92 ರನ್ ಗಳನ್ನು ಸೇರಿಸಿತು. ಅಯ್ಯಕುಟ್ಟಿರ ತಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಮಾತ್ರ ಗಳಿಸಿ ಸೋಲು ಕಂಡಿತು.

ಬೋವೇರಿಯoಡ ಮತ್ತು ಮುದ್ದೂರ ನಡುವಿನ ಪಂದ್ಯದಲ್ಲಿ ಬೋವೇರಿಯಂಡ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುದ್ದೂರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿತು. ಬೋವೇರಿಯಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.

ಮೈದಾನ 2;

ಬಲ್ಲಚಂಡ ಮತ್ತು ನಾಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಲ್ಲಚಂಡ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನಾಟೋಳಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳನ್ನು ಗಳಿಸಿತು. ಬಲ್ಲಚಂಡ 2.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 31 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.

ಚೀಯಣಮಾಡ ಮತ್ತು ಮುಕ್ಕಾಟಿರ(ಹರಿಹರ) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ 9 ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೀಯಣಮಾಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಸೇರಿಸಿತು. ಮುಕ್ಕಾಟಿರ 5.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ಬದಲೇರ ಮತ್ತು ಚಿರಿಯಪಂಡ ನಡುವಿನ ಪಂದ್ಯದಲ್ಲಿ ಚಿರಿಯಪಂಡ ತಂಡ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬದಲೇರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಗಳಿಸಿತು. ಚಿರಿಯಪಂಡ 4.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಗಳನ್ನು ಸೇರಿಸಿ ಜಯ ದಾಖಲಿಸಿತು.  

ಕುಪ್ಪಣಮಾಡ ಮತ್ತು ನಂದೀರ ನಡುವಿನ ಪಂದ್ಯದಲ್ಲಿ ನಂದೀರ 20 ರನ್ ಗಳಿಂದ ಗೆಲುವು ಕಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನಂದೀರ 6 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಸೇರಿಸಿತು. ಕುಪ್ಪಣಮಾಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು.

ದಾಸಂಡ ಮತ್ತು ಕೊದೇಂಗಡ ನಡುವಿನ ಪಂದ್ಯದಲ್ಲಿ ದಾಸಂಡ 25 ರನ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಾಸಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 103 ರನ್ ಗಳನ್ನು ಗಳಿಸಿತು. ಕೊದೇಂಗಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 78 ರನ್ ಗಳನ್ನು ಸೇರಿಸಿ ಸೋಲು ಕಂಡಿತು.

ಚೀಕoಡ ಮತ್ತು ಪಾರುವಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಚೀಕಂಡ 7 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾರುವಂಗಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿತು. ಚೀಕಂಡ 3.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 48 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.

ಅರಮಣಮಾಡ (ಬೇಗೂರು) ಮತ್ತು ಚೆರುವಾಳಂಡ ನಡುವಿನ ಪಂದ್ಯದಲ್ಲಿ ಅರಮಣಮಾಡ ತಂಡಕ್ಕೆ 7 ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆರುವಾಳಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಸೇರಿಸಿತು. ಅರಮಣಮಾಡ 4.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಗಳಿಸಿ ಗೆಲುವಿನ ನಗು ಬೀರಿತು.