ಗಾಳಿಬೀಡು ಚಾಂಪಿಯನ್ ಕ್ಲಬ್ ವತಿಯಿಂದ ಕ್ರಿಕೆಟ್ ಮತ್ತು ವಿವಿಧ ಕ್ರೀಡಾಕೂಟ
admincoorgdaily

ಮಡಿಕೇರಿ: ಗಾಳಿಬೀಡು ಚಾಂಪಿಯನ್ ಕ್ಲಬ್ ವತಿಯಿಂದ ಆಹ್ವಾನಿತ ೬ ತಂಡಗಳ ಕ್ರಿಕೆಟ್ ಪಂದ್ಯಾಟ ಹಾಗೂ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ, ಗುಡ್ಡಗಾಡು ಓಟದ ಸ್ಪರ್ಧೆ ಏ.೨೫,೨೬ ರಂದು ನಡೆಯಲಿದೆ ಎಂದು ಗಾಳಿಬೀಡು ಚಾಂಪಿಯನ್ ಕ್ಲಬ್‌ನ ಅಧ್ಯಕ್ಷ ದುಗ್ಗಳ ಕಪಿಲ್ ತಿಳಿಸಿದ್ದಾರೆ.
ಗಾಳಿಬೀಡು ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕ್ರೀಡಾಕೂಟಕ್ಕೆ ಗಾಳಿಬೀಡು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದ ಅವರು, ಏ.೨೫, ೨೬ರಂದು ಕ್ರಿಕೆಟ್, ಏ.೨೬ರಮದು ಹಗ್ಗಜಗ್ಗಾಟ, ಮತ್ತು ಓಟದ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಾಳಿಬೀಡು ಚಾಂಪಿಯನ್ ಕ್ಲಬ್‌ನ ಉಪಾಧ್ಯಕ್ಷ ದಿಶಾಂತ್, ಕಾರ್ಯದರ್ಶಿ ಶಿವಪ್ರಸಾದ್ ರೈ, ಸಹ ಕಾರ್ಯದರ್ಶಿ ಸಂಗಮ್, ಖಜಾಂಚಿ ಬಭಿತ್ ಪುಜಾರಿ ಉಪಸ್ಥಿತರಿದ್ದರು.