ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ': ಕೊಡಗು ಉಳಿಸಿ ಅಭಿಯಾನ ಒತ್ತಾಯ

Jun 30, 2026 - 17:02
 0  220
ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ': ಕೊಡಗು ಉಳಿಸಿ ಅಭಿಯಾನ ಒತ್ತಾಯ

ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಮತ್ತು ಪರಿಸರ ಸಮತೋಲನಕ್ಕೆ ಧಕ್ಕೆ ತರುತ್ತಿರುವ ರೆಸಾರ್ಟ್ ಸಂಸ್ಕೃತಿ ಹಾಗೂ ಹೊರಗಿನವರ ಭೂಮಿ ಖರೀದಿಗೆ ಕಡಿವಾಣ ಹಾಕುವಂತೆ ಕೊಡಗು ಉಳಿಸಿ ಮತ್ತು ಕಾವೇರಿ ಅಭಿಯಾನ ಒತ್ತಾಯಿಸಿದೆ.

ಅಭಿಯಾನದ ಸಂಚಾಲಕ ನಿ.ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ, ದಲ್ಲಾಳಿಗಳು ಕಮಿಷನ್‌ಗಾಗಿ ಹೊರಗಿನವರಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ. ಇದೇ ಮುಂದುವರೆದರೆ ಕೊಡವ ಲ್ಯಾಂಡ್ ರೆಡ್ಡಿ ಲ್ಯಾಂಡ್ ಆಗಲಿದೆ. ಮಿಜೋರಾಂ ಮಾದರಿಯಲ್ಲಿ ಕಾನೂನು ಜಾರಿಗೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂತರ್ ಗೌಡ, ಸಂಸದ ಯದುವೀರ್ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಕೊಡಗು-ಕಾವೇರಿ ರಕ್ಷಣೆಗೆ ಜಮ್ಮಾ ಹಕ್ಕುದಾರರು, ಸ್ಥಳೀಯರು ಒಗ್ಗೂಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ಯಾನ್ ಬೋಪಯ್ಯ, ಪಿ.ಅಪ್ಪಯ್ಯ, ರಾಯ್ ಬೋಪಣ್ಣ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0