ಹಾನಗಲ್ 'B' CSC ಕೇಂದ್ರದಲ್ಲಿ 'ಡಿ.ಜಿ.ಪೇ' ಸೇವೆಗೆ ಚಾಲನೆ
ಸೋಮವಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಶಾಂತಳ್ಳಿ ವಲಯದ ಹಾನಗಲ್ 'B' CSC ಸೇವಾಕೇಂದ್ರದಲ್ಲಿ ಗ್ರಾಮದ ಜನರಿಗೆ ಸಣ್ಣ ಮೊತ್ತದ ನಗದಿನ ಅಗತ್ಯತೆ ಪೂರೈಸಲು 'ಡಿ.ಜಿ.ಪೇ' ಸೇವೆಯನ್ನು ಆರಂಭಿಸಲಾಗಿದೆ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದರ್ಶನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ಸುಶೀಲಮ್ಮ, ಯೋಜನಾಧಿಕಾರಿ ಹನುಮಂತಪ್ಪ, ಹಣಕಾಸು ಪ್ರಬಂಧಕಿ ಗೀತಾ ಉಪಸ್ಥಿತರಿದ್ದರು. ಮಾತನಾಡಿದ ಮಾಜಿ ಗ್ರಾ.ಪಂ. ಅಧ್ಯಕ್ಷ ದರ್ಶನ್, "ಹಳ್ಳಿ ಪ್ರದೇಶದ ಜನತೆ ಹಣವನ್ನು ಪಡೆಯಲು ದೂರದ ಬ್ಯಾಂಕ್‌ಗಳು ಹಾಗೂ ATM ಗಳಿಗೆ ಹೋಗುವುದು ಕಷ್ಟ. ಈ ಸಮಸ್ಯೆಯನ್ನು ಮನಗಂಡು 'ಡಿ.ಜಿ.ಪೇ' ಸೌಲಭ್ಯವನ್ನು ಜನರಿಗೆ ತಲುಪಿಸಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಲಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಜನಾಧಿಕಾರಿ ಹನುಮಂತಪ್ಪ ಮಾತನಾಡಿ, "ಡಿ.ಜಿ.ಪೇ ಮೂಲಕ ಪಲಾನುಭವಿಗಳಿಗೆ ತಕ್ಷಣ ಹಣ ದೊರೆಯಲಿದೆ. ಇದರಿಂದ ಆರ್ಥಿಕ ಸಬಲೀಕರಣವಾಗಲಿದೆ. ಎಲ್ಲಾ ಪಲಾನುಭವಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು" ಎಂದು ಮಾಹಿತಿ ನೀಡಿದರು. ಈ ವೇಳೆ 3 ಸದಸ್ಯರಿಂದ ಒಟ್ಟು ₹30,000/- ಮೊತ್ತದ withdrawal ಮಾಡುವ ಮೂಲಕ ಸೇವೆಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ ಹಾಗೂ ಸೇವಾದಾರರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
