ಹೊದವಾಡ ಕೇಮಾಡುರಸ್ತೆ ದುರಸ್ತಿ ವಿಳಂಬ; ಗ್ರಾಮಸ್ಥರ ಆಕ್ರೋಶ

Jun 11, 2026 - 11:14
 0  221
ಹೊದವಾಡ ಕೇಮಾಡುರಸ್ತೆ ದುರಸ್ತಿ ವಿಳಂಬ; ಗ್ರಾಮಸ್ಥರ ಆಕ್ರೋಶ

ಮಡಿಕೇರಿ;ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದವಾಡ-ಕೇಮಾಡು ರಸ್ತೆ ಇಂದಿಗೂ ದುರಸ್ತಿಯಾಗದೆ ಗುಂಡಿಗಳಿಂದ ಕೂಡಿದೆ. ಮೂರು ವರ್ಷಗಳ ಹಿಂದೆಯೇ ವೇದಿಕೆಯೊಂದರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಈ ರಸ್ತೆಯನ್ನು ಶೀಘ್ರದಲ್ಲೇ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಆದರೆ, ಭರವಸೆ ನೀಡಿ ಮೂರು ವರ್ಷ ಕಳೆದರೂ ಇದುವರೆಗೆ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಪಂಚಾಯತ್ ವ್ಯಾಪ್ತಿಯಲ್ಲೇ ಇಂತಹ ದುಃಸ್ಥಿತಿ ಇರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0