Kodagu

ಕೊಡಗು ಜೆಡಿಎಸ್‌ಗೆ ಜಿಲ್ಲಾಧ್ಯಕ್ಷರ ನೇಮಕಕ್ಕೆ ಆಗ್ರಹ:ದೇವೇಗೌಡರಿಗೆ ಬಿ.ಎಲ್. ನಾಗರಾಜ್ ನೇತೃತ್ವದಲ್ಲಿ ಮನವಿ

admincoorgdaily

ಕೊಡಗು ಜೆಡಿಎಸ್‌ಗೆ ಜಿಲ್ಲಾಧ್ಯಕ್ಷರ ನೇಮಕಕ್ಕೆ ಆಗ್ರಹ:ದೇವೇಗೌಡರಿಗೆ ಬಿ.ಎಲ್. ನಾಗರಾಜ್ ನೇತೃತ್ವದಲ್ಲಿ ಮನವಿ

ಸೋಮವಾರಪೇಟೆ: ಕೊಡಗು ಜಿಲ್ಲಾ ಜೆಡಿಎಸ್ ಪಕ್ಷಕ್ಕೆ ಸಮರ್ಥ ನಾಯಕತ್ವದ ಕೊರತೆಯಿದ್ದು, ಕೂಡಲೇ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಎಲ್. ನಾಗರಾಜ್ ಅವರು ದೇವೇಗೌಡರ ಸ್ವಗೃಹಕ್ಕೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಚುರುಕು ನೀಡಲು ಹಾಗೂ ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಧ್ಯಕ್ಷರ ನೇಮಕ ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಜೆಡಿಎಸ್ ಮುಖಂಡ ರಕ್ಷಿತ್ ಯಡೂರು ಉಪಸ್ಥಿತರಿದ್ದರು.