ಫಲಕ ನಾಶ:ದುಷ್ಕರ್ಮಿಗಳ ಕೃತ್ಯಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಖಂಡನೆ
admincoorgdaily
ಮಡಿಕೇರಿ:ಪವಿತ್ರ ಕಾವೇರಿ ತೀರ್ಥೋದ್ಭವದ ಸುಸ್ವಾಗತ ಮತ್ತು ಶುಭಕೋರುವ ಫಲಕಗಳನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಎಲ್ಲಾ ಸದಸ್ಯ ಸಮಾಜಗಳು ಮತ್ತು ಸಂಘಟನೆಗಳ ಸಹಕಾರದಲ್ಲಿ ಸುಮಾರು 80 ಫಲಕಗಳನ್ನು ಕುಶಾಲನಗರದಿಂದ ತಲಕಾವೇರಿ ತನಕ ಹಾಕಲಾಗಿತ್ತು. ಕಾರುಗುಂದ ಮತ್ತು ಬಕ್ಕ ಸೇರಿದಂತೆ ಕೆಲವು ಕಡೆ ಈ ಫಲಕಗಳನ್ನು ಕೆಲವು ದುಷ್ಕರ್ಮಿಗಳು ಕಳೆದ ರಾತ್ರಿ ಹರಿದು ಹಾಕಿರುವುದು ಕಂಡುಬಂದಿದೆ. ಸದರಿ ಕೃತ್ಯವನ್ನು ಬಲವಾಗಿ ಖಂಡಿಸುತ್ತಿದ್ದು ಈ ದುಷ್ಕರ್ಮಿಗಳ ಮೇಲೆ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಪ್ರಮುಖರು ಹೇಳಿಕೆ ನೀಡಿದ್ದಾರೆ.