ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಆಯ್ಕೆಯಾದ ಧೀರಜ್ ರೈ ಅವರಿಗೆ ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನ

Dec 28, 2025 - 12:19
Dec 28, 2025 - 12:19
 0  371
ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಆಯ್ಕೆಯಾದ ಧೀರಜ್ ರೈ ಅವರಿಗೆ ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಥಮ ರಾಷ್ಟ್ರಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಆಯ್ಕೆಯಾದ ಕೊಡಗಿನ ಧೀರಜ್ ರೈ ಶ್ರೀನಿವಾಸ್ ಅವರನ್ನು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ‌ ಜಗದೀಶ್ ಮಂದಪ್ಪ,ಕಾರ್ಯದರ್ಶಿ ಪಿ.ಎ ನಾಗೇಶ್,ಉಪಾಧ್ಯಕ್ಷರಾದ ಕ್ರಿಸ್ಟೋಫರ್ ಮಡಿಕೇರಿ, ಖಜಾಂಜಿ ದೀಪು ಮಾಚಯ್ಯ,ಸದಸ್ಯರಾದ ಲಿಜೇಶ್ ಅಮ್ಮತ್ತಿ,ತೀರ್ಪುಗಾರರಾದ ದರ್ಶನ್ ಸುಕುಮಾರ್,ಅಶ್ವಥ್ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0