ಸ್ಮೃತಿ ಮಂಧಾನಾಗೆ ಚೀಟಿಂಗ್ ಮಾಡಿದ್ರಾ ಪಲಶ್ ಮುಚ್ಚಲ್? | ವಿವಾಹಕ್ಕೆ ತಡೆಯ ಬಳಿಕ ಸಂಚಲನ ಮೂಡಿಸಿದ ವೈರಲ್ ಸ್ಕ್ರೀನ್‌ಶಾಟ್‌ಗಳು!

Nov 26, 2025 - 11:06
 0  1.4k
ಸ್ಮೃತಿ ಮಂಧಾನಾಗೆ ಚೀಟಿಂಗ್ ಮಾಡಿದ್ರಾ ಪಲಶ್ ಮುಚ್ಚಲ್?  | ವಿವಾಹಕ್ಕೆ ತಡೆಯ ಬಳಿಕ ಸಂಚಲನ ಮೂಡಿಸಿದ ವೈರಲ್ ಸ್ಕ್ರೀನ್‌ಶಾಟ್‌ಗಳು!
Photo credit: INDIA TODAY

ಮುಂಬೈ: ಕ್ರಿಕೆಟರ್ ಸ್ಮೃತಿ ಮಂಧಾನಾ ಮತ್ತು ಸಂಗೀತಗಾರ-ಚಲನಚಿತ್ರ ನಿರ್ಮಾಪಕ ಪಲಶ್ ಮುಚ್ಚಲ್ ಅವರ ವಿವಾಹ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿರುವ ಸಂದರ್ಭದಲ್ಲಿ, ಮುಚ್ಚಲ್ ಮೇಲೆ ‘ಮೋಸ’ ಮಾಡಿದ್ದಾರೆ ಎಂಬ ಆರೋಪದ ಸಾಮಾಜಿಕ ಜಾಲತಾಣದ ಸ್ಕ್ರೀನ್‌ಶಾಟ್‌ಗಳು ವೈರಲ್‌ ಆಗಿ ಹೊಸ ಸಂಚಲನ ಸೃಷ್ಟಿಸಿವೆ. ಈ ಸ್ಕ್ರೀನ್‌ಶಾಟ್‌ಗಳ ಪ್ರಾಮಾಣಿಕತೆಯನ್ನು India Today ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ವರದಿ ಮಾಡಿದೆ .

ನ.23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಗದಿಯಾಗಿದ್ದ ಮಂಧಾನಾ–ಮುಚ್ಚಲ್ ವಿವಾಹವನ್ನು, ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯ ಸಂಬಂಧಿ ತೊಂದರೆ ಕಂಡು ಬಂದ ಪರಿಣಾಮ ಆಸ್ಪತ್ರೆಗೆ ದಾಖಲಿಸುತ್ತಲೇ ಕುಟುಂಬಗಳು ತುರ್ತಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದವು. ಕೆಲವೇ ಗಂಟೆಗಳಲ್ಲಿ, ಪಲಶ್ ಮುಚ್ಚಲ್ ಕೂಡಾ ಆರೋಗ್ಯ ಸಮಸ್ಯೆಯಿಂದ ನಗರ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಅವರನ್ನು ಮುಂಬೈಗೆ ಸ್ಥಳಾಂತರಿಸಲಾಯಿತು.

ಈ ಬೆಳವಣಿಗೆಗಳ ಮಧ್ಯೆ, ಸ್ಮೃತಿ ಮಂಧಾನಾ ತಮ್ಮ ನಿಶ್ಚಿತಾರ್ಥದ ಫೋಟೋಗಳು ಹಾಗೂ ಪ್ರಪೋಸಲ್ ವಿಡಿಯೋ ಸೇರಿ ಹಲವಾರು ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ಫೀಡ್‌ನಿಂದ ತೆಗೆದುಹಾಕಿರುವುದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮಂಗಳವಾರ ಬೆಳಗ್ಗೆ, ‘ಮೇರಿ ಡಿ’ಕೋಸ್ಟಾ’ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾಗಿ ಹೇಳಲಾದ, ಮುಚ್ಚಲ್ ಮತ್ತು ಒಂದು ಮಹಿಳೆಯ ನಡುವೆ ನಡೆದಂತೆ ಕಾಣುವ ಚಾಟ್‌ ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದವು. ನಂತರ ರೆಡ್ಡಿಟ್‌ನಲ್ಲೂ ಆ ಚಿತ್ರಗಳನ್ನು ಹಂಚಲಾಯಿತು. ಸ್ಕ್ರೀನ್‌ಶಾಟ್‌ಗಳು ಪ್ರಕಟವಾದ ಮೂಲ ಖಾತೆ ಇದೀಗ ನಿಷ್ಕ್ರಿಯವಾಗಿದೆ.

ಈ ಚಾಟ್‌ಗಳು 2025ರ ಮೇ ತಿಂಗಳದವು ಎಂದು ಹೇಳಲಾಗಿದ್ದು, ಮುಚ್ಚಾಲ್ ಆ ಮಹಿಳೆಯನ್ನು ಈಜಲು ಆಹ್ವಾನಿಸಿದ್ದಂತೆ ತೋರಿಸುತ್ತವೆ. ಮಹಿಳೆ ಮುಚ್ಚಾಲ್ ಅವರ ಸಂಬಂಧದ ಸ್ಥಿತಿಯನ್ನು ಪ್ರಶ್ನಿಸಿದಾಗ, ಅವರು ತಪ್ಪಿಸಿಕೊಂಡು, ಮತ್ತೆ ಮತ್ತೆ ಭೇಟಿಗಾಗಿ ಒತ್ತಾಯಿಸಿರುವಂತೆ ಸ್ಕ್ರೀನ್‌ಶಾಟ್‌ಗಳಲ್ಲಿ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಕ್ರೀನ್‌ಶಾಟ್‌ಗಳು ವೈರಲ್ ಆದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಆಘಾತ, ಖಂಡನೆ ಮಿಶ್ರಿತ ಪ್ರತಿಕ್ರಿಯೆಗಳು ಹರಿದುಬಂದವು. ಕೆಲವರು “ಇವು ತಿರುಚಿದದ್ದಾಗಿರಬಹುದು” ಎಂದು ಸಂದೇಹ ವ್ಯಕ್ತಪಡಿಸಿದ್ದು, ಇತರರು ಕ್ರಿಕೆಟರ್ ಪರವಾಗಿ ಬೆಂಬಲ ಸೂಚಿಸಿದ್ದಾರೆ.

ಒಬ್ಬ ರೆಡ್ಡಿಟ್ ಬಳಕೆದಾರರು, “ಓದುವುದೇ ಅಸಹ್ಯ ಅನಿಸಿತು. ಜನರಲ್ಲಿ ನಾಚಿಕೆ ಎಂಬುದೇ ಇಲ್ಲ” ಎಂದು ಬರೆದರೆ, ಮತ್ತೊಬ್ಬರು “ಪಲಶ್ ಮಾಡಿದ ಭವ್ಯ ಸನ್ನೆಗಳಿಂದ ಸ್ಮೃತಿ ಕಣ್ಮಚ್ಚಿರುವಂತೆ ಕಾಣುತ್ತಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಸಾಮಾಜಿಕ ಮಾಧ್ಯಮ ಯುಗದಲ್ಲಿ ಯಾವುದನ್ನಾದರೂ ತಿರುಚಬಹುದು; ಆದ್ದರಿಂದ ಎಚ್ಚರಿಕೆಯಿಂದಿರಬೇಕು” ಎಂದು ತಿಳಿಸಿದ್ದಾರೆ.

ಕೆಲವರು “ವಿವಾಹ ತಡವಾದದ್ದೇ ಕ್ರಿಕೆಟರ್ ಗೆ ಒಳ್ಳೆಯದಾಗಿರಬಹುದು” ಎಂದು ಪ್ರತಿಕ್ರಿಯಿಸಿದ್ದು, ಮಂಧಾನಾ ಅವರ ತಂದೆಯ ಅರೋಗ್ಯ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0