ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದ ನಿರ್ದೇಶಕ ಸಂಗೀತ್ ಸಾಗರ್ ಸಾವು
ಶಿವಮೊಗ್ಗ: ಗುರುವಾರ ಕೊಪ್ಪದಲ್ಲಿ ಚಿತ್ರೀಕರಣ ಸ್ಥಳದಲ್ಲಿ ‘ಪಾತ್ರಧಾರಿ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದ ನಿರ್ದೇಶಕ ಸಂಗೀತ್ ಸಾಗರ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಶಿವಮೊಗ್ಗದ ಕೊಪ್ಪ ಪ್ರದೇಶದಲ್ಲಿ ಸಿನಿಮಾ ತಂಡ ಕಳೆದ ಕೆಲವು ದಿನಗಳಿಂದ ಶೂಟಿಂಗ್ ನಡೆಸುತ್ತಿತ್ತು. ಇದೇ ವೇಳೆ ಬೆಳಗಿನ ಚಿತ್ರೀಕರಣದ ಸಮಯದಲ್ಲಿ ಸಾಗರ್ ಅಚಾನಕ್ ನೆಲಕ್ಕೆ ಬಿದ್ದು ಅಸ್ವಸ್ಥರಾದರು. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ಮೃತದೇಹವನ್ನು ಪ್ರಸ್ತುತ ಆಸ್ಪತ್ರೆಯ ಮರ್ಗದಲ್ಲಿ ಇರಿಸಲಾಗಿದೆ.
ಸಂಗೀತ್ ಸಾಗರ್ ಪೂರ್ವದಲ್ಲಿ ‘ಸ್ನೇಹಿತ’ (2021) ಮತ್ತು ‘ಓ ಪ್ರೀತಿಯಾ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಸಂಗೀತ ಸಂಯೋಜಕನಾಗಿಯೂ ಅವರು ಕೆಲವು ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಾಗರ್ ಪತ್ನಿ ಸುಶ್ಮಿತಾ ಮತ್ತು ಮಗಳು ವಂಧ್ಯಾ ಸೇರಿದಂತೆ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಆಸ್ಪತ್ರೆಯ ಬಿಲ್ ಪಾವತಿ ಇನ್ನೂ ಆಗದಿರುವುದರಿಂದ ಮೃತದೇಹ ಹಸ್ತಾಂತರಕ್ಕೆ ವಿಳಂಬವಾಗುವ ಸಾಧ್ಯತೆಯಿತ್ತು. ಚಿತ್ರ ತಂಡ ಮತ್ತು ನಿರ್ಮಾಪಕರು ಆಸ್ಪತ್ರೆಗೆ ಭೇಟಿ ನೀಡಿ ಬಿಲ್ ಪಾವತಿ ಮಾಡುವ ನಿರೀಕ್ಷೆಯಿದೆ.
What's Your Reaction?
Like
3
Dislike
0
Love
1
Funny
0
Angry
0
Sad
1
Wow
0
