ಮೀನು ಮರಿಗಳ ವಿತರಣೆ
admincoorgdaily

ಮಡಿಕೇರಿ ಜು.04:-ಪ್ರತಿ ವರ್ಷದಂತೆ 2026-27ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ ಮೀನುಮರಿಗಳನ್ನು ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು.
ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗೆ ಮಡಿಕೇರಿ ತಾಲ್ಲೂಕು ವಿನಯ್ 9769070850, ಸೋಮವಾರಪೇಟೆ ತಾಲ್ಲೂಕು ನಿರ್ವಾಣಿ 9448918782, 7338218782, ವಿರಾಜಪೇಟೆ ತಾಲ್ಲೂಕಿನ ನಿಶಾಂತ್ ಬಿ.ಕೆ. 9731363143, ಕುಶಾಲನಗರ ತಾಲ್ಲೂಕಿನ ಸಚಿನ್ 9886717626 ಹಾಗೂ ಮಂಜು 8296765595 ನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.