Kodagu

ಕಡಂಗ: ಶಾಲಾ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ

admincoorgdaily

ಕಡಂಗ:ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ವಿದ್ಯಾರ್ಥಿಗಳಿಗೆ, ಸೌಜನ್ಯ ಸೇವಾ ಶ್ರಮ ಬೆಂಗಳೂರು ಇವರ ಸಹಯೋಗದೊಂದಿಗೆ ಸ್ಥಳೀಯ ಉದ್ಯಮಿ, ಕೃಷಿಕ ಉದಿಯಂಡ ಡಿ. ಚೆಂಗಪ್ಪನವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಳೆಗಾಲಕ್ಕೆ ಉಪಯೋಗಿಸಲು ಸುಮಾರು 80 ರೈನ್ ಕೋಟುಗಳನ್ನು ವಿತರಿಸಿದರು.

 ಕಾರ್ಯಕ್ರಮದಲ್ಲಿ ನರಿಯಂಡದ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್, ಶ್ರೀಮತಿ ರಾಣಿ ಗಣಪತಿ , ನಂಬಿಯಪಂಡ ವಾಣಿ, ಶಾಲಾ ಸ್ಥಳ ದಾನಿಗಳಾದ ಕಣಿಯರ ಪ್ರಕಾಶ್, SDMC ಅಧ್ಯಕ್ಷರು ಹಾಗೂ ಸದಸ್ಯರು ಫಾತಿಮಾ, ಸಂಶಿಯ ಹಾಜರಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಕೆ.ಎಂ.ವಿಮಲಾ ರವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಶಿಕ್ಷಕರಾದ ಶ್ರೀಮತಿ ವತ್ಸಲ ಎ. ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ವರದಿ: ನೌಫಲ್