ಗೋಣಿಕೊಪ್ಪದಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ
ಪೊನ್ನಂಪೇಟೆ ,ಸೆ 01: ಪಿ.ಸಿ. ಕ್ಲಬ್, ರೋಟರಿ ಗೋಣಿಕೊಪ್ಪಲು ಹಾಗೂ ಸೀನಿಯರ್ ಚೇಂಬರ್ ಗೋಣಿಕೊಪ್ಪಲು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಹಾಗೂ ಮುಕ್ತ ವಿಭಾಗ ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 192 ಮಂದಿ ಚೆಸ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದರು.
ಪಂದ್ಯಾವಳಿಯನ್ನು ಹಿರಿಯ ವಕೀಲ ಕಳ್ಳಿಚಂಡ ಅಪ್ಪಣ್ಣ ಉದ್ಘಾಟಿಸಿದರು. ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ಚೈತನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಿ.ಸಿ. ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಕಾರ್ಯದರ್ಶಿ ಟಿ.ಜೆ. ಆಂಟೋನಿ, ರೋಟರಿ ಕ್ಲಬ್ ಕಾರ್ಯದರ್ಶಿ ಮನೆಯಪಂಡ ಮಾಚಯ್ಯ, ಕಿಂಗ್ ಕನ್‌ಸ್ಟ್ರಕ್ಷನ್ ಮಾಲೀಕ ಅಂಥೋನಿ ರೋಬಿನ್, ಪೋರಂಗಡ ದಿಲನ್ ಚಂಗಪ್ಪ, ರೋಟೇರಿಯನ್ ಹಾಗೂ ಬಿಜೆಪಿ ಮುಖಂಡ ವಿಜಯ್, ಸೀನಿಯರ್ ಚೇಂಬರ್ ಅಧ್ಯಕ್ಷ ಮಂಡೇಪಂಡ ಸಚಿನ್ ಬೆಳ್ಳಿಯಪ್ಪ ಹಾಗೂ ಕಾರ್ಯದರ್ಶಿ ಮೋಹನ್ ಭಾಗವಹಿಸಿದ್ದರು. ಉಪನ್ಯಾಸಕಿ ಪ್ರೀತಿ ಪ್ರಾರ್ಥಿಸಿದರು. ರೋಮಿ ಸುಬ್ಬಯ್ಯ ಸ್ವಾಗತಿಸಿದರು. ಹೆಮ್ಮಚ್ಚಿಮನೆ ಧರಣಿ ಕಾರ್ಯಕ್ರಮ ನಿರ್ವಹಿಸಿದರು.
192 ಮಂದಿ ಸ್ಪರ್ಧಿಗಳ ಭಾಗಿ ಮುಕ್ತ ವಿಭಾಗದಲ್ಲಿ 47, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ 41, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ 13, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ 68 ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ 23 ಮಂದಿ ಸೇರಿದಂತೆ ಒಟ್ಟು 192 ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಚದುರಂಗ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಜಿಲ್ಲೆಯ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಪಂದ್ಯಾವಳಿ ಉತ್ತಮ ವೇದಿಕೆಯಾಯಿತು.
ವಿವಿಧ ವಿಭಾಗಗಳ ವಿಜೇತರು ಮುಕ್ತ ವಿಭಾಗ: ಪ್ರಥಮ ಶ್ರೀನಿವಾಸ್ ಪಿ.ವಿ., ಗೋಣಿಕೊಪ್ಪಲು ದ್ವಿತೀಯ ಲಿಜೋ ಜೇಮ್ಸ್, ಪೊನ್ನಂಪೇಟೆ ತೃತೀಯ ಸೋಜಿತ್ ಎಂ.ಎಚ್., ಸಿ.ಸಿ.ಜಿ., ಗೋಣಿಕೊಪ್ಪಲು. ಪ್ರೌಢಶಾಲಾ ಬಾಲಕರ ವಿಭಾಗ: ಪ್ರಥಮ ಉನ್ನತ್ ಸಾರಥ್ಯ ಪಿ.ಎಸ್., ಜ್ಞಾನಗಂಗಾ, ಹಾರಂಗಿ ದ್ವಿತೀಯ ರೋಷನ್ ಆರ್. ನಾಯಕ್, ಸೇಂಟ್ ಆನ್ಸ್, ವಿರಾಜಪೇಟೆ ತೃತೀಯ – ವೈಭವ್ ಚೇತನ್, ಕೆಎಎಲ್‌ಎಸ್, ಗೋಣಿಕೊಪ್ಪಲು.
ಪ್ರೌಢಶಾಲಾ ಬಾಲಕಿಯರ ವಿಭಾಗ: ಪ್ರಥಮ ಅಧ್ಯಾ ಅಯ್ಯಪ್ಪ, ಕೆಎಎಲ್‌ಎಸ್, ಗೋಣಿಕೊಪ್ಪಲು ದ್ವಿತೀಯ ಸನಾ ರಾಘವನ್, ರೂಟ್ಸ್ ತೃತೀಯ ಯಾಜಿನಿ ಎನ್., ಲಯನ್ಸ್ ಶಾಲೆ, ಗೋಣಿಕೊಪ್ಪಲು. ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಪ್ರಥಮ ಅದ್ನಾನ್ ಬೇಗ್ ಎಂ.ಎ., ಸೇಂಟ್ ಆಂಟೋನೀಸ್ ಶಾಲೆ, ಪೊನ್ನಂಪೇಟೆ ದ್ವಿತೀಯ ಧ್ಯಾನ್, ಕಾಪ್ಸ್, ಗೋಣಿಕೊಪ್ಪಲು ತೃತೀಯ ಶ್ರೇಣಿಕ್ ಎಚ್.ಎಂ., ಕೆಎಎಲ್‌ಎಸ್, ಗೋಣಿಕೊಪ್ಪಲು.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಪ್ರಥಮ ಜನ್ಯಾ, ಜನರಲ್ ತಿಮ್ಮಯ್ಯ ಶಾಲೆ ದ್ವಿತೀಯ ವಿಭಾ ಶೆಟ್ಟಿ, ಸೇಂಟ್ ಮೈಕಲ್ಸ್, ಮಡಿಕೇರಿ ತೃತೀಯ ಬೋಜಮ್ಮ ಪಿ.ಪಿ., ಲಯನ್ಸ್ ಶಾಲೆ, ಗೋಣಿಕೊಪ್ಪಲು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
