ಜ.1 ರಿಂದ 4 ರವರೆಗೆ ಮೂರ್ನಾಡುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ

Dec 24, 2025 - 18:42
Dec 25, 2025 - 10:17
 0  170
ಜ.1 ರಿಂದ 4 ರವರೆಗೆ ಮೂರ್ನಾಡುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ

ಮಡಿಕೇರಿ: 2026ರ ಏಪ್ರಿಲ್ ನಲ್ಲಿ ಚೇನಂಡ ಕುಟುಂಬಸ್ಥರ ನೇತೃತ್ವದಲ್ಲಿ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ನಡೆಯಲಿರುವ ಚೇನಂಡ ಕಪ್ ಹಾಕಿ ಉತ್ಸವದ ಅಂಗವಾಗಿ ಜ.1 ರಿಂದ 4 ರವರೆಗೆ ಮೂರ್ನಾಡುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ಚೇನಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ತಿಳಿಸಿದ್ದಾರೆ.

ಪ್ರತಿಭಾವಂತ ಯುವ ಹಾಕಿ ಪಟುಗಳನ್ನು ಗುರುತಿಸುವ ಸಲುವಾಗಿ ಇದೇ ಪ್ರಪ್ರಥಮ ಬಾರಿಗೆ ಪಂದ್ಯಾಟ ಆಯೋಜಿಸಲಾಗುತ್ತಿದೆ. ಈಗಾಗಲೇ16 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಡಿ.28 ಕೊನೆ ದಿನವಾಗಿದೆ. ಆಸಕ್ತ ಶಾಲೆಯ ಆಟಗಾರರು ಹರ್ಷ ಅಯ್ಯಣ್ಣ ಮೊ.8762349951, ದೀನಾ ಚಂಗಪ್ಪ ಮೊ.9481114095, ವಿಪಿನ್ ಗಣಪತಿ ಮೊ.9035198434 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

4ನೇ ತರಗತಿಯಿಂದ 7ನೇ ತರಗತಿವರೆಗಿನ ಪ್ರಾಥಮಿಕ ವಿಭಾಗ ಮತ್ತು 8 ರಿಂದ 10ನೇ ತರಗತಿವರೆಗಿನ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರಿಗಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿ ಯಾವುದೇ ಒಂದು ಸಮೂಹಕ್ಕೆ ಸೀಮಿತವಾಗಿಲ್ಲ. ಪಂದ್ಯಾಟ ಮುಕ್ತವಾಗಿದೆ. ವಿಜೇತ ತಂಡಕ್ಕೆ ಬಹುಮಾನ ನೀಡಲಾಗುವುದು. ಜತೆಗೆ 30 ಆಟಗಾರರರಿಗೆ ಹಾಕಿ ಉತ್ಸವದ ದಿನದಿಂದ 30 ದಿನಗಳಕಾಲ ತರಬೇತಿ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ 12 ಮಂದಿ ಆಟಗಾರರಿಗೆ ಕ್ರೀಡಾ ಕಿಟ್‌ಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಆಯೋಜನಾ ಸಮಿತಿಯ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ವಕ್ತಾರ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರಾದ ನಂದಾ ಜಗದೀಶ್, ಸಂಪತ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0