ದಿಯಾ ಭೀಮಯ್ಯಗೆ ಅಂತರರಾಷ್ಟ್ರೀಯ ಮಟ್ಟದ ಜೂನಿಯರ್ ಗ್ರಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿಯ ಪದಕ
ಮಡಿಕೇರಿ: ಪಿ ಡಿ ಎಮ್ ಬಿ ಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪುಣೆ ಯಲ್ಲಿ ಆಗಸ್ಟ್ 25 ರಿಂದ 30 ನೇ ತಾರೀಖಿನವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಇಂಡಿಯ ಜೂನಿಯರ್ ಇಂಟರ್ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ 2026 ಬ್ಯಾಡ್ಮಿಂಟನ್ ನಲ್ಲಿ ಟೂರ್ನಿಯ ನಾಲ್ಕನೇ ಶ್ರೇಯಾಂಕಿತ ಕೊಡಗಿನ ದಿಯಾ ಭೀಮಯ್ಯ ಬಾಲಕಿಯರ ಡಬಲ್ಸ್ ನಲ್ಲಿ ತೆಲಂಗಾಣದ ಕೀರ್ತಿ ಮಂಚಾಲ ಜೊತೆಗೂಡಿ ಬೆಳ್ಳಿಯ ಪದಕಗಳಿಸಿರುತ್ತಾರೆ. ಫೈನಲ್ ಪಂದ್ಯದಲ್ಲಿ ಅವರು ಥೈಲ್ಯಾಂಡ್ ನ ಚಾಂತ್ರಾತ್ ಮರ್ಡಾಂಕುಲ್ ಮತ್ತು ಪೀರ್ಪ್ಲಾಯಿ ಸುಟ್ಟಿವಾರಯನೊನ್ ಜೋಡಿ ಎದುರು 15-21, 11-21 ಅಂಕಗಳಿಂದ ಸೋಲು ಅನುಭವಿಸ ಬೇಕಾಯಿತು.
ಟೂರ್ನಿಯಲ್ಲಿ ಭಾರತ ಒಡಗೂಡಿ ಇಂಡೊನೇಷಿಯ, ಮಲೇಶಿಯಾ , ಥೈಲ್ಯಾಂಡ್, ಯು.ಎಸ್.ಎ, ಯು.ಎ.ಇ,ದೇಶದ ಆಟಗಾರರು ಭಾಗವಹಿಸಿದ್ದರು. 19 ವರ್ಷ ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ದಿಯಾ ಅವರು ಗಳಿಸಿದ ನಾಲ್ಕನೆಯ ಅಂತಾರಾಷ್ಟ್ರೀಯ ಪದಕ ಇದಾಗಿದೆ. ಈ ಮೊದಲು ನೇಪಾಳದಲ್ಲಿ ನಡೆದ ನೇಪಾಳ ಇಂಟರ್ನ್ಯಾಷನಲ್ ಸೀರಿಸ್ 2024 ರಲ್ಲಿ ಬಾಲಕಿಯರ ವಿಭಾಗದ ಡಬಲ್ಸ್ ನಲ್ಲಿ ಬೆಳ್ಳಿಯ ಪದಕ ಮತ್ತು ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದರು ಮತ್ತು ಇದೇ ತಿಂಗಳಲ್ಲಿ ನಡೆದ ಕೊಟಕ್ ಇಂಡಿಯ ಜೂನಿಯರ್ ಇಂಟರ್ನ್ಯಾಷನಲ್ ಸೀರಿಸ್ 2026 ರಲ್ಲಿ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
