ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಷ್ಟು ಮಂದಿ ಸಾವನಪ್ಪಿದ್ದಾರೆ ಗೊತ್ತೇ?
ಬೆಂಗಳೂರು: ಐದು ವರ್ಷಗಳಲ್ಲಿ ರಾಜ್ಯದ ರಸ್ತೆಗಳಲ್ಲಿ ನಡೆದ ಅಪಘಾತಗಳ ಸಂಖ್ಯೆ 2.13 ಲಕ್ಷ. ಈ ಅಪಘಾತಗಳಲ್ಲಿ 60,115 ಮಂದಿ ಮೃತಪಟ್ಟಿದ್ದಾರೆ. ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ.ಎಸ್. ನವೀನ್ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.2020ರಲ್ಲಿ 34,178 ಅಪಘಾತದಲ್ಲಿ 9,760 ಮಂದಿ ಸಾವನಪ್ಪಿದ್ದಾರೆ.2021ರಲ್ಲಿ 34,647 ರಸ್ತೆ ಅಪಘಾತದಲ್ಲಿ 10,038 ಮಂದಿ ಮೃತಪಟ್ಟಿದ್ದಾರೆ.2022ರಲ್ಲಿ 39762 ಅಪಘಾತದಲ್ಲಿ 11,702 ಮಂದಿ ಸಾವನಪ್ಪಿದ್ದಾರೆ.2023ರಲ್ಲಿ 43,440 ರಸ್ತೆ ಅಪಘಾತದಲ್ಲಿ 12,321 ಮಂದಿ ಕೊನೆಯುಸಿರೆಳೆದಿದ್ದಾರೆ.2024ರಲ್ಲಿ 39,228 ರಸ್ತೆ ಅಪಘಾತದಲ್ಲಿ 10,319 ಮಂದಿ ನಿಧನರಾಗಿದ್ದಾರೆ.2025ರ ಜೂನ್ 30ರವರೆಗೆ ರಾಜ್ಯದಲ್ಲಿ 21,937 ರಸ್ತೆ ಅಪಘಾತಗಳು ಉಂಟಾಗಿದ್ದು, 5,975 ಮಂದಿ ಸಾವನ್ನಪ್ಪಿದ್ದಾರೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮುಂಗಾರು ಅಧಿವೇಶನದಲ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ.