ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಪತಿ; ಪತ್ನಿಯಿಂದ ಚಪ್ಪಲಿ ಸೇವೆ

Oct 28, 2025 - 19:18
 0  2.1k
ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಪತಿ; ಪತ್ನಿಯಿಂದ ಚಪ್ಪಲಿ ಸೇವೆ
Photo credit:The Indian express

ಚಿಕ್ಕೋಡಿ (ಬೆಳಗಾವಿ): ಪ್ರೇಯಸಿಯೊಂದಿಗೆ ಲಾಡ್ಜ್‌ ನಲ್ಲಿ ಕಾಲ ಕಳೆಯುತ್ತಿದ್ದ ಪತಿಯನ್ನು ಪತ್ನಿಯೇ ರೆಡ್‌ಹ್ಯಾಂಡ್ ಆಗಿ ಹಿಡಿದು, ಸಾರ್ವಜನಿಕರ ಮುಂದೆ ಚಪ್ಪಲಿಯಿಂದ ಥಳಿಸಿದ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಚಿಕ್ಕೋಡಿ ನಿವಾಸಿ ಅವಿನಾಶ್ ಭೋಸಲೆ ಎಂಬಾತ ಪಟ್ಟಣದ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ತನ್ನ ಪ್ರೇಯಸಿಯೊಂದಿಗೆ ರೂಮ್ ಬುಕ್ ಮಾಡಿಕೊಂಡು ಕಾಲ ಕಳೆಯುತ್ತಿದ್ದನು. ಈ ಮಾಹಿತಿಯು ಹೇಗೋ ಪತ್ನಿಯ ಕಿವಿಗೆ ತಲುಪಿದ್ದು, ಆಕೆ ತನ್ನ ತಂದೆಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾಳೆ.

ಲಾಡ್ಜ್ ಸಿಬ್ಬಂದಿಯ ಸಹಕಾರದೊಂದಿಗೆ ಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೇ ಪತ್ನಿ ಪತಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಎನ್ನಲಾಗಿದೆ. ಕೋಪೋದ್ರಿಕ್ತಳಾದ ಆಕೆ ಪತಿಯನ್ನು ಎಳೆದು ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಥಳಿಸಿದ್ದಾಳೆ. ಈ ವೇಳೆ ಸ್ಥಳೀಯರು ನಿಂತು ಘಟನೆಯನ್ನು ವೀಕ್ಷಿಸಿದ್ದು, ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಶಮನಗೊಳಿಸಿರುವುದಾಗಿ ತಿಳಿದುಬಂದಿದೆ.

What's Your Reaction?

Like Like 0
Dislike Dislike 3
Love Love 1
Funny Funny 0
Angry Angry 1
Sad Sad 3
Wow Wow 3