ವ್ಯಾಲೆಂಟೆನ್ಸ್‌ ಡೇ ಪಾರ್ಟಿ ಮುಗಿಸಿ ಪಾಪಿ ಪತಿ ಮಾಡಿದ್ದೇನು ಗೊತ್ತಾ!

Feb 17, 2026 - 23:27
 0  2.1k
ವ್ಯಾಲೆಂಟೆನ್ಸ್‌ ಡೇ ಪಾರ್ಟಿ ಮುಗಿಸಿ ಪಾಪಿ ಪತಿ ಮಾಡಿದ್ದೇನು ಗೊತ್ತಾ!

ಹರಿಯಾಣ: ವ್ಯಾಲೆಂಟೆನ್ಸ್‌ ಡೇ (Valentine’s Day) ಪಾರ್ಟಿ ಬಳಿಕ ಪತಿಯೇ (Husband) ಪತ್ನಿಯ (Wife) ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹರಿಯಾಣದ (Haryana) ಬಹದ್ದೂರ್‌ಗಢದಲ್ಲಿ ನಡೆದಿದೆ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹಂಸಿಯ ಮಹಾಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25 ರಂದು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

 ಹತ್ಯೆಯಾದ ಮಹಿಳೆಯನ್ನು ಮಹಾಕ್ ಎಂದು ಗುರುತಿಸಲಾಗಿದೆ. ಆಕೆ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಹತ್ಯೆ ಆರೋಪಿಯನ್ನು ಅನ್ಶುಲ್ ಧವನ್ ಎಂದು ಗುರುತಿಸಲಾಗಿದೆ. ಈತ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ. ದಂಪತಿ ಪ್ರೇಮಿಗಳ ದಿನವನ್ನು ಸಂಭ್ರಮದಿಂದಲೇ ಆಚರಿಸಿದ್ದರು.

 ನಂತರ ಧವನ್‌ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದ. ಬಳಿಕ ದರೋಡೆಕೋರರು ತಮ್ಮ ಮೇಲೆ ದಾಳಿ ಮಾಡಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಕತೆ ಕಟ್ಟಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಕೇವಲ 18 ಗಂಟೆಗಳಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

 ಭಾನುವಾರ (ಫೆ.15) ರಾತ್ರಿ 11:00 ಗಂಟೆಯ ಸುಮಾರಿಗೆ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, ಅಪರಿಚಿತ ದಾಳಿಕೋರರು ದರೋಡೆಗೆ ಯತ್ನಿಸಿದ್ದಾರೆ. ತನ್ನ ಪತ್ನಿಯ ಕತ್ತು ಸೀಳಿದ್ದಾರೆ ಎಂದು ಹೇಳಿದ್ದ. ಈ ಪ್ರಕರಣದ ತನಿಖೆ ಪ್ರಾರಂಭವಾದ ನಂತರ ಅನ್ಶುಲ್ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ್ದರು. ಅನ್ಶುಲ್ ತನ್ನ ಕಥೆಯನ್ನು ಬದಲಾಯಿಸುತ್ತಲೇ ಇದ್ದ. ದಾಳಿಕೋರರನ್ನು ವಿವರಿಸಲು ಸಹ ಆತನಿಗೆ ಸಾಧ್ಯವಾಗಲಿಲ್ಲ, ಇದು ಪೊಲೀಸರಿಗೆ ಇನ್ನಷ್ಟು ಅನುಮಾನ ಮೂಡಿಸಿತ್ತು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 1
Sad Sad 5
Wow Wow 0