ಅಣ್ಣನನ್ನು ಕೊಂ*ದು15 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ!

ಅಣ್ಣನನ್ನು ಕೊಂ*ದು15 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ!

4ಜುನಾಗಢ, ನ. 6: ಗುಜರಾತ್‌ನ ಜುನಾಗಢದಲ್ಲಿ ನಡೆದ ಕ್ರೂರ ಘಟನೆಯೊಂದು ರಾಜ್ಯವನ್ನು ಬೆಚ್ಚಿಬೀಳಿಸಿದೆ. ಕೇವಲ 15 ವರ್ಷದ ಬಾಲಕನೊಬ್ಬ ತನ್ನ ಅಣ್ಣನನ್ನು ಹತ್ಯೆಮಾಡಿ, ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನೂ ಕೊಲೆ ಮಾಡಿರುವ ಘಟನೆ ನಡೆದಿದೆ. 

ಈ ಭೀಕರ ಕೃತ್ಯ ಅಕ್ಟೋಬರ್ 16ರಂದು ನಡೆದಿದ್ದು, ಎರಡು ವಾರಗಳ ನಂತರ ಬಿಹಾರದಲ್ಲಿದ್ದ ಮಹಿಳೆಯ ಕುಟುಂಬದ ಅನುಮಾನದಿಂದ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಲಕ ಮತ್ತು ಅಣ್ಣನ ನಡುವೆ ವಾಗ್ವಾದ ಉಂಟಾಗಿ, ಕೋಪದ ಆವೇಶದಲ್ಲಿ ಕಬ್ಬಿಣದ ರಾಡ್‌ನಿಂದ ಅಣ್ಣನ ತಲೆಗೆ ಹೊಡೆದಿದ್ದಾನೆ. ಅಣ್ಣ ಸ್ಥಳದಲ್ಲೇ ಕುಸಿದುಬಿದ್ದ ಬಳಿಕ, ಗರ್ಭಿಣಿ ಅತ್ತಿಗೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಚಾರದ ವೇಳೆ ಆಕೆ ಕಿರುಚುತ್ತಿದ್ದಂತೆ, ಬಾಲಕ ಆಕೆಯ ಹೊಟ್ಟೆಗೆ ಮೊಣಕಾಲಿನಿಂದ ಬಡಿದು ನಂತರ ಕತ್ತು ಹಿಸುಕಿದ್ದಾನೆ. ಬಳಿಕ ಇಬ್ಬರ ಶವಗಳನ್ನು ಮನೆಯ ಹಿಂಭಾಗದ ಐದು ಅಡಿ ಆಳದ ಗುಂಡಿಯಲ್ಲಿ ಹೂತು, ಬಟ್ಟೆಗಳನ್ನು ಸುಟ್ಟು ರಕ್ತದ ಗುರುತುಗಳನ್ನು ಅಳಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ತಾಯಿ ಸಾಕ್ಷ್ಯಗಳನ್ನು ನಾಶಮಾಡಲು ಮಗನಿಗೆ ಸಹಾಯ ಮಾಡಿದ ಆರೋಪವೂ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಗರ್ಭಿಣಿಯಾಗಿದ್ದರೆಂಬುದೂ ದೃಢಪಟ್ಟಿದೆ.

ದೀಪಾವಳಿಯ ಸಂದರ್ಭದಲ್ಲಿ ಮಹಿಳೆಯನ್ನು ಸಂಪರ್ಕಿಸಲು ಕುಟುಂಬದವರು ಹಲವು ಬಾರಿ ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗದ ಕಾರಣ ಅನುಮಾನಗೊಂಡಿದ್ದರು. ಬಳಿಕ ತಾಯಿ “ರಸ್ತೆ ಅಪಘಾತದಲ್ಲಿ ದಂಪತಿಗಳು ಸಾವನ್ನಪ್ಪಿದ್ದಾರೆ” ಎಂದು ಸುಳ್ಳು ಹೇಳಿದ್ದಾಳೆ. ಯಾವುದೇ ಸಾಕ್ಷ್ಯವಿಲ್ಲದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರು. ಬಳಿಕ ಬಾಲಕ ಕೊಲೆಯನ್ನು ಒಪ್ಪಿಕೊಂಡು ಶವಗಳನ್ನು ಹೂತಿದ್ದ ಸ್ಥಳವನ್ನು ತೋರಿಸಿದನೆಂದು ಪೊಲೀಸರು ತಿಳಿಸಿದ್ದಾರೆ.

ಅವಶೇಷಗಳನ್ನು ಹೊರತೆಗೆಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಸುಮಾರು ನಾಲ್ಕು ದಶಕಗಳ ಹಿಂದೆ ಬಿಹಾರದಿಂದ ಜುನಾಗಢಕ್ಕೆ ವಲಸೆ ಬಂದಿದ್ದ ಈ ಕುಟುಂಬದ ತಂದೆ ದೇವಸ್ಥಾನದ ಅರ್ಚಕರಾಗಿದ್ದು, ಮೃತ ಅಣ್ಣ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿ ಬಾಲಕ ಕುಟುಂಬದ ದನಗಳನ್ನು ನೋಡಿಕೊಳ್ಳುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಮಕ್ಕಳ ವಯಸ್ಸಿನಲ್ಲಿಯೇ ಇಷ್ಟು ಕ್ರೌರ್ಯ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.