ಪಕ್ಕದ ಮನೆಯ ಸಾಕು ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ!
ದಾವಣಗೆರೆ: ವಾಕಿಂಗ್ ಮಾಡುವಾಗ ಪಕ್ಕದ ಮನೆಯ ಸಾಕು ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೊಬ್ಬ ಕುಡುಗೊಲಿನಿಂದ ನಾಯಿಯನ್ನು (Dog) ಕೊಚ್ಚಿ ಕೊಂದ ಘಟನೆ ಹೊನ್ನಾಳಿ (Honnali) ತಾಲೂಕಿನ ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ ತನ್ನ ಸಾಕು ಸಾಯಿಯ ಜತೆ ಗ್ರಾಮದ ಬೀದಿಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದ. ಈ ವೇಳೆ ರವಿ ಎಂಬವರ ಸಾಕು ನಾಯಿ ಮಂಜುನಾಥ್‌ನ ನಾಯಿಯನ್ನು ನೋಡಿ ಬೊಗಳಿದೆ.
ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಕೈಯಲ್ಲಿದ್ದ ಕುಡುಗೋಲಿನಿಂದ ರವಿಯವರ ಸಾಕುನಾಯಿಯನ್ನು ಕೊಚ್ಚಿ ಕೊಂದಿದ್ದಾನೆ. ಈ ವೇಳೆ ರವಿಯವರ ಮೇಲೂ ಮಂಜುನಾಥ್ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.