ಅಮೆಝಾನ್‌ ನಲ್ಲಿ ಮೊಬೈಲ್‌ ಆರ್ಡರ್‌ ಮಾಡಿದ ಇಂಜಿನಿಯರ್‌ಗೆ ಪಾರ್ಸೆಲ್‌ನಲ್ಲಿ ಬಂದಿದ್ದೇನು ಗೊತ್ತಾ!

Oct 30, 2025 - 19:01
Oct 30, 2025 - 19:09
 0  1.6k
ಅಮೆಝಾನ್‌ ನಲ್ಲಿ ಮೊಬೈಲ್‌ ಆರ್ಡರ್‌ ಮಾಡಿದ ಇಂಜಿನಿಯರ್‌ಗೆ ಪಾರ್ಸೆಲ್‌ನಲ್ಲಿ ಬಂದಿದ್ದೇನು ಗೊತ್ತಾ!
Photo credit: TV09

ಬೆಂಗಳೂರು, ಅ.30: ಆನ್‌ಲೈನ್‌ ಖರೀದಿ ಇದೀಗ ವಂಚಕರ ಹೊಸ ಅಂಗಳವಾಗಿದೆ. ಸೈಬರ್‌ ಮೋಸದ ಹೊಸ ರೀತಿಯು ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ನಗರದ ಇಂಜಿನಿಯರ್‌ ಪ್ರೇಮಾನಂದ್‌ ಎಂಬವರು ಅಮೆಝಾನ್‌ ಆಪ್‌ ಮೂಲಕ ₹1.85 ಲಕ್ಷ ಮೌಲ್ಯದ ಸ್ಯಾಮ್ಸಂಗ್‌ Z ಫೋಲ್ಡ್‌ ಮೊಬೈಲ್‌ ಆರ್ಡರ್‌ ಮಾಡಿದ್ದರು. ನಿಗದಿತ ದಿನಾಂಕಕ್ಕೆ ಪಾರ್ಸೆಲ್‌ ತಲುಪಿದರೂ, ಪ್ಯಾಕೆಟ್‌ ತೆರೆಯುತ್ತಿದ್ದಂತೆಯೇ ಅವರಿಗೆ ಶಾಕ್‌. ಮೊಬೈಲ್‌ ಬದಲಿಗೆ ಬಾಕ್ಸ್‌ ನೊಳಗೆ ಟೈಲ್ಸ್‌ ಕಲ್ಲು ಇತ್ತು!

ಘಟನೆಯಿಂದ ಬೆಚ್ಚಿಬಿದ್ದ ಪ್ರೇಮಾನಂದ್‌ ತಕ್ಷಣ ಡೆಲಿವರಿ ಬಾಯ್‌ ಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬಳಿಕ ಅವರು ಎನ್‌ಸಿಆರ್‌ಪಿ ಪೋರ್ಟಲ್‌ ನಲ್ಲಿ ದೂರು ದಾಖಲಿಸಿ, ಕುಮಾರಸ್ವಾಮಿ ಲೇಔಟ್‌ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ಪೊಲೀಸರು ಅಮೆಝಾನ್‌ ನ ಪ್ಯಾಕಿಂಗ್‌ ಮತ್ತು ವಿತರಣಾ ಪ್ರಕ್ರಿಯೆಗಳ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ.

ಆನ್‌ಲೈನ್‌ ಶಾಪಿಂಗ್‌ ವೇಳೆ ಎಚ್ಚರ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು, ವಿತರಣೆ ವೇಳೆ ಪ್ಯಾಕೆಟ್‌ ತೆರೆಯುವ ವಿಡಿಯೊ ಸಾಕ್ಷ್ಯ ಇಟ್ಟುಕೊಳ್ಳಲು ಸಲಹೆ ನೀಡಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 2
Angry Angry 1
Sad Sad 1
Wow Wow 0