Kodagu

ದೊಡ್ಡಪುಲಿಕೋಟು : ಗಾಳಿ ಮಳೆಗೆ ಹಾರಿ ಹೋದ ಪ್ರಯಾಣಿಕರ ಬಸ್ಸು ತಂಗುದಾಣದ ಮೇಲ್ಚಾವಣಿ

admincoorgdaily

ದೊಡ್ಡಪುಲಿಕೋಟು : ಗಾಳಿ ಮಳೆಗೆ ಹಾರಿ ಹೋದ ಪ್ರಯಾಣಿಕರ ಬಸ್ಸು ತಂಗುದಾಣದ ಮೇಲ್ಚಾವಣಿ

ನಾಪೋಕ್ಲು :ನಾಪೋಕ್ಲು ಬಳಿಯ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ಭಾನುವಾರ ಸುರಿದ ಧಾರಾಕಾರ ಗಾಳಿ ಮಳೆಗೆ ಪ್ರಯಾಣಿಕರ ಬಸ್ಸು ತಂಗುದಾಣದ ಮೇಲ್ಚಾವಣಿಯ ಶೀಟ್ ಗಳು ಹಾರಿ ಹೋದ ಘಟನೆ ನಡೆದಿದೆ.

 ನಾಪೋಕ್ಲು ಭಾಗಮಂಡಲ ಮುಖ್ಯರಸ್ತೆಯ ದೊಡ್ಡಪುಲೆಕೋಟು ಗ್ರಾಮದ ಶಾಲೆಯ ಪಕ್ಕದಲ್ಲಿರುವ ಪ್ರಯಾಣಿಕರ ಬಸ್ಸು ತಂಗುದಾಣ ಇದಾಗಿದ್ದು ಭಾನುವಾರದ ಗಾಳಿ ಮಳೆಗೆ ಮೇಲ್ಚಾವಣಿಗೆ ಅಳವಡಿಸಿದಾಗ ಶೀಟ್ಗಳು ಹಾರಿಹೋಗಿದೆ. ಇದರಿಂದ ಈ ವ್ಯಾಪ್ತಿಯ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಮಳೆಗೆ ಆಸರೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು ಸಂಬಂಧಪಟ್ಟ ಇಲಾಖೆ ಕೂಡಲೇ ಪ್ರಯಾಣಿಕರ ಬಸ್ಸು ತಂಗುದಾಣವನ್ನು ದುರಸ್ತಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ.