ಪಟಾಕಿ, ಬಲೂನ್, ಫ್ಲೆಕ್ಸ್ ಬಳಸಬೇಡಿ: ಪರಿಸರ ಕಾಳಜಿ ಕಾಪಾಡುವಂತೆ ಶಾಸಕ ಎ.ಎಸ್. ಪೊನ್ನಣ್ಣ ಮನವಿ
admincoorgdaily

ಮಡಿಕೇರಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಶನಿವಾರ ಬೆಳಗ್ಗೆ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರು, ತಮ್ಮನ್ನು ಸ್ವಾಗತಿಸಲು ಬರುವ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.
ತಮ್ಮ ಸಂದೇಶದಲ್ಲಿ ಶಾಸಕರು, ತಮ್ಮ ಆಯ್ಕೆಗೆ ಸಹಕರಿಸಿ, ಬೆಂಬಲಿಸಿ, ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅದೇ ವೇಳೆ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ *ಫ್ಲೆಕ್ಸ್, ಬಲೂನ್ ಹಾಗೂ ಪಟಾಕಿ*ಯಂತಹ ಪರಿಸರಕ್ಕೆ ಮಾಲಿನ್ಯ ಉಂಟುಮಾಡುವ ವಸ್ತುಗಳನ್ನು ಬಳಸಬಾರದು ಎಂದು ಕೋರಿದ್ದಾರೆ. ಬದಲಿಗೆ ಪರಿಸರ ಕಾಳಜಿಯನ್ನು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.