16 ವರ್ಷದ ಬಾಲಕನಿಂದ ಡಬಲ್ ಮರ್ಡರ್;ಕಾರಣವೇನು ಗೊತ್ತೇ!

Mar 26, 2026 - 19:56
 0  1.4k
16 ವರ್ಷದ ಬಾಲಕನಿಂದ ಡಬಲ್ ಮರ್ಡರ್;ಕಾರಣವೇನು ಗೊತ್ತೇ!
ಪ್ರಾತಿನಿಧಿಕ ಚಿತ್ರ

ಬೆಂಗಳೂರು, ಮಾರ್ಚ್ 26: ಪೀಣ್ಯದ ಹೆಚ್ಎಂಟಿ ಲೇಔಟ್‌ನ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್ (murder) ನಡೆದಿರುವಂತಹ ಘಟನೆ ನಡೆದಿದೆ. ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ ಮತ್ತು ತಮ್ಮನನ್ನ ಹತ್ಯೆ ಮಾಡಲಾಗಿದೆ. ಯಮುನಾ(36) ಮತ್ತು ಸುದೀಪ್(34) ಕೊಲೆಯಾದವರು. ಸ್ಥಳಕ್ಕೆ ಡಿಸಿಪಿ ನಾಗೇಶ್, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ನಡೆದಿದ್ದೇನು?

ಆರೋಪಿ ತಾಯಿ ಛಾಯಾ ಹಾಗೂ ಯುಮುನಾ ಗಂಡನ ಮಧ್ಯೆ ಅಕ್ರಮ ಸಂಬಂಧ ಹಿನ್ನೆಲೆ ಇದನ್ನು ಪ್ರಶ್ನಿಸಲು ಛಾಯಾ ಮನೆಗೆ ಬಂದಿದ್ದ ಯಮುನಾ ಮತ್ತು ತಮ್ಮ ಸುದೀಪ್ ಜಗಳವಾಡುತ್ತಿದ್ದರು. ಈ ವೇಳೆ ಜಗಳದ ಮಧ್ಯೆ ಎಂಟ್ರಿಯಾದ ಛಾಯಾ ಪುತ್ರ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದಾನೆ.

ಅಪ್ರಾಪ್ತ ಬಾಲಕ ಇಬ್ಬರಿಗೂ ಹತ್ತಾರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 1