ವರದಕ್ಷಿಣೆ ಕಿರುಕುಳ ಆರೋಪ: ಗರ್ಭಿಣಿ ಆತ್ಮಹತ್ಯೆ

Jan 11, 2026 - 14:56
 0  712
ವರದಕ್ಷಿಣೆ ಕಿರುಕುಳ ಆರೋಪ: ಗರ್ಭಿಣಿ ಆತ್ಮಹತ್ಯೆ

ಹಾವೇರಿ, ಜ.10: ವರದಕ್ಷಿಣೆ ಕಿರುಕುಳ ಆರೋಪದ ನಡುವೆ ಎರಡು ತಿಂಗಳ ಗರ್ಭಿಣಿ ಗೃಹಿಣಿಯೊಬ್ಬರು ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಮೃತಳನ್ನು ಸುನೀತಾ ದೊಡ್ಡಮನಿ (35) ಎಂದು ಗುರುತಿಸಲಾಗಿದೆ. ಮದುವೆಯಾಗಿ ಕೇವಲ ಒಂಭತ್ತು ತಿಂಗಳಾಗಿದ್ದು, ಇತ್ತೀಚೆಗೆ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ವರದಕ್ಷಿಣೆ ತರುವಂತೆ ಪತಿ ಗಿರೇಶ ದೊಡ್ಡಮನಿ ಹಾಗೂ ಆತನ ಮನೆಯವರು ಪದೇಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರೆಂದು ಮೃತಳ ಕುಟುಂಬ ಆರೋಪಿಸಿದೆ. ಈ ಕಿರುಕುಳದಿಂದ ಮನನೊಂದು ಸುನೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮಗಳ ಸಾವಿನಿಂದ ಆಕ್ರೋಶಗೊಂಡ ಕುಟುಂಬಸ್ಥರು ಶಿಗ್ಗಾಂವಿ ಪೊಲೀಸ್ ಠಾಣೆ ಎದುರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0