ಡಾ ಮಂತರ್ ಗೌಡ ರವರಿಂದ50 ಲಕ್ಷ ರೂ ವೆಚ್ಚದ ತಡೆಗೋಡೆ ಲೋಕಾರ್ಪಣೆ
ಮಡಿಕೇರಿ:ನಗರದ ಜಲಾಶಯ ಬಡಾವಣೆಯ ನಾಗರೀಕರ ಬಹುಕಾಲದ ಕೋರಿಕೆಯಾಗಿದ್ದ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕಾಮಗಾರಿಗಳನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಲೋಕಾರ್ಪಣೆ ಮಾಡಿದರು.ಗೌಳಿಬೀದಿ ನೂತನ ಕಾಂಕ್ರಿಟ್ ರಸ್ತೆ,ಭಗವತಿ ನಗರದ ಮೂಲಕ ಅಬ್ಬಿಫಾಲ್ಸ್ ಗೆ ಹೋಗುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ನಾಗರೀಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು.
ಮಾನ್ಯ ಮುಖ್ಯಮಂತ್ರಿಗಳು ನೀಡಿದ ವಿಶೇಷ ಅನುದಾನದಲ್ಲಿ 3.5 ಕೋಟಿ ರೂಗಳನ್ನು ಮಡಿಕೇರಿ ನಗರದ ಬಡಾವಣೆಗಳ ಅಭಿವೃದ್ಧಿ ಗೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಿ ಮಡಿಕೇರಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸಲು ಪ್ರಯತ್ನ ಪಡುವುದಾಗಿ ಈ ಸಂಧರ್ಭದಲ್ಲಿ ಡಾ ಮಂತರ್ ಗೌಡ ಭರವಸೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾರವರು ಮಾತನಾಡಿ 2018 ರ ಪ್ರಕೃತಿ ವಿಕೋಪ ಆದಲ್ಲಿಂದ ಜಲಾಶಯ ಬಡಾವಣೆಯ ನಿವಾಸಿಗಳು ಭೂ ಕುಸಿತದ ಆತಂಕದಿಂದಲೇ
ಇದ್ದು ತಮ್ಮ ಬಡಾವಣೆ ರಕ್ಷಣೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು.ದೊಡ್ಡ ಮೊತ್ತದ ಕಾಮಗಾರಿಯಾದ್ದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.ಕಳೆದ ವರ್ಷ ಮಳೆಗಾಲದಲ್ಲಿ ಸದರಿ ಅಪಾಯಕಾರಿ ಪ್ರದೇಶವನ್ನು ವೀಕ್ಷಿಸಿದ ಶಾಸಕರು ಅನುದಾನದ ಭರವಸೆ ನೀಡಿದ್ದರು. ಈಗ 50 ಲಕ್ಷ ರೂ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿ ಬಡಾವಣೆ ನಿವಾಸಿಗಳು ನಿರಾಳಾಗಿರುವಂತೆ ಮಾಡಿದ್ದಾರೆ.
ಹಾಗಾಗಿ ಬಡಾವಣೆಯ ಎಲ್ಲಾ ನಿವಾಸಿಗಳ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಕಲಾವತಿ, ವಾರ್ಡ ನಗರ ಸಭಾ ಸದಸ್ಯೆ ಶ್ರೀಮತಿ ಉಷಾ ಕಾವೇರಪ್ಪ,ನಗರ ಸಭೆ ಆಯುಕ್ತರಾದ ರಮೇಶ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್,ಕಿರಿಯ ಇಂಜಿನಿಯರ್ ಹೇಮ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಮುಖರಾದ ಪುಷ್ಪ ಪೂಣಚ್ಚ,ಜಿ.ಸಿ.ಜಗದೀಶ್,ಮುದ್ದುರಾಜ್,ಅಂಬೇಕಲ್ ಕುಶಾಲಪ್ಪ,ಕಾವೇರಪ್ಪ,ಅಂಬೇಕಲ್ ನವೀನ್,ಜೀವನ್,ಕೋಚನ ಹರಿ ಪ್ರಸಾದ್,ವಿ.ಜಿ.ಮೋಹನ್, ಫ್ಯಾನ್ಸಿ ಪಾರ್ವತಿ,ಶಶಿಕಲಾ,ಕೋಚನ ಚೇತನ್,ರಾಜು,ಅರ್ಜುನ್ ಸೇರಿದಂತೆ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
