ಡಾ ಮಂತರ್ ಹರಸಾಹಸ ಲೋಕಾರ್ಪಣೆ ಹಾದಿಯತ್ತ ಕೊಡವ ಹೆರಿಟೇಜ್ ಸೆಂಟರ್; 5 ಕೋಟಿ ರೂಗಳಿಗೆ ಅನುಮೋದನೆ

Mar 12, 2026 - 18:46
 0  412
ಡಾ ಮಂತರ್ ಹರಸಾಹಸ ಲೋಕಾರ್ಪಣೆ ಹಾದಿಯತ್ತ ಕೊಡವ ಹೆರಿಟೇಜ್ ಸೆಂಟರ್; 5 ಕೋಟಿ ರೂಗಳಿಗೆ ಅನುಮೋದನೆ

ಮಡಿಕೇರಿ; ಬರೋಬ್ಬರಿ 17 ವರ್ಷಗಳಿಂದ ನೆನೆಗುದಿಗೆ ಬಿದ್ದು ಚಿದಂಬರ ರಹಸ್ಯವಾಗಿ ಉಳಿದಿದ್ದ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರ ಪ್ರಯತ್ನದಿಂದ 5 ಕೋಟಿ ರೂಗಳ ಅನುಮೋದನೆ ದೊರೆತು ಲೋಕಾರ್ಪಣೆಗೊಳ್ಳಲಿದೆ.

2009-10 ರಲ್ಲಿ ಆರಂಭಗೊಂಡ ಈ ಯೋಜನೆ ಹತ್ತು ಹಲವು ವಿವಾದಗಳನ್ನು ಸೃಷ್ಟಿಸಿ ಪೂರ್ಣಗೊಳ್ಳದೆ ಇದ್ದುದರಿಂದ ಕೊಡಗಿನ ಸಾರ್ವಜನಿಕರು ನಿರಾಶೆಗೊಂಡಿದ್ದರು. ಐನ್ ಮನೆ ,ಉಂಬಳ ಮನೆ,ಕನ್ನಿಕೋಂಬರೆ,ಬಾಡೆ ಹೀಗೆ ಕೊಡವ ಪರಂಪರೆಯ ವೈಭವವನ್ನು ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಆರಂಭಗೊಂಡ ಈ ಯೋಜನೆ ಅದೇನೋ ಇಚ್ಚಾ ಶಕ್ತಿಯ ಕೊರತೆಯಿಂದ ಪೂರ್ಣಗೊಳ್ಳಲೇ ಇಲ್ಲಾ.ಇದಕ್ಕೆ ಯಾರ ಬಳಿ ಸಮರ್ಪಕ ಉತ್ತರವೂ ಇರಲಿಲ್ಲಿ. ಎರಡು ಮೂರುಎ ಸ್ಥಳಕ್ಕೆ ಭೇಟಿ ನೀಡಿದ ಡಾ ಮಂತರ್ ಗೌಡ ರವರು ವಿಧಾನ ಸಭೆಯಲ್ಲಿ ನಿಯಮ 73 ರಡಿ ಸಚಿವರ ಗಮನ ಸೆಳೆಯುವ ಪ್ರಶ್ನೆಯನ್ನು ಕೇಳಿದ್ದು ಈಗ 5 ಕೋಟಿ ರೂಗಳನ್ನು ಅಭಿವೃದ್ದಿ ಪಡಿಸಲು ಅನುಮೋದನೆ ನೀಡಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0