ಕೆ.ನಿಡುಗಣೆ ನೂತನ ಪಂಚಾಯತ್ ಕಛೇರಿ ಕಟ್ಟಡ ನಿರ್ಮಾಣಕ್ಕೆ ಡಾ ಮಂತರ್ ಗೌಡ ನಿರ್ದೇಶನ

Mar 2, 2026 - 13:47
 0  399
ಕೆ.ನಿಡುಗಣೆ ನೂತನ ಪಂಚಾಯತ್ ಕಛೇರಿ ಕಟ್ಟಡ ನಿರ್ಮಾಣಕ್ಕೆ ಡಾ ಮಂತರ್ ಗೌಡ ನಿರ್ದೇಶನ

ಮಡಿಕೇರಿ; ತಾಲೂಕಿನ ಕೆ.ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕಛೇರಿ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ನಿರ್ದೇಶನ ನೀಡಿದ್ದಾರೆ.

ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಮೊಟ್ಟೆ ಜಹಂಗೀರ್ ಪರಿಶಿಷ್ಟ ಜಾತಿ ಕಾಲೋನಿ ಜನರ ಮನೆಗೆ ಹೋಗುವ 10 ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೆ.ನಿಡುಗಣೆ ಪಂಚಾಯತ್ ಜಿಲ್ಲೆಯಲ್ಲಿ ಅತ್ಯಂತ ಆದಾಯ ಹೊಂದಿರುವ ಪಂಚಾಯತ್ ಆಗಿದ್ದು ಸುಮಾರು 2 .5 ಕೋಟಿ ವಾರ್ಷಿಕ ಆದಾಯ ಗಳಿಸುತ್ತಿದ್ದು ಒಂದು ಸುಸಜ್ಜಿತ ಸ್ವಂತ ಕಟ್ಟಡ ಹೊಂದಿಲ್ಲದೆ ಇರುವುದು ವಿಷಾದನೀಯ ಎಂದು ಹೇಳಿದರು.

 ಈ ಹಿನ್ನಲೆಯಲ್ಲಿ ಸ್ಥಳ ಗುರುತಿಸಿ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಕಾರ್ಯಸೂಚಿ ತಯಾರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ರವರಿಗೆ ಸೂಚನೆ ನೀಡುವುದರ ಜೊತೆಗೆ ತಮ್ಮ ಶಾಸಕರ ಅನುದಾನದಲ್ಲಿ ಹಣ ಒದಗಿಸುತ್ತಿದ್ದು ಜೊತೆಗೆ ಪಂಚಾಯತ್ ಸಂಪನ್ಮೂಲ ಗಳನ್ನು ಬಳಕೆ ಮಾಡುವಂತೆ ನಿರ್ದೇಶನ ನೀಡಿದರು.

ಈ ಸಂಧರ್ಭದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಕೆ.ನಿಡುಗಣೆ ಪಂಚಾಯತ್ ನಿಕಟಪೂರ್ವ ಆಡಳಿತ ಮಂಡಳಿ ಸದಸ್ಯರಾದ ಕೊಕ್ಕಲೆರ ಅಯ್ಯಪ್ಪ, ಜಾನ್ಸನ್ ಪಿಂಟೋ,ರಘು ಪ್ರಮುಖರಾದ ವಿ.ಜಿ.ಮೋಹನ್, ಕೋಚನ ಹರಿಪ್ರಸಾದ್,ಮುದ್ದುರಾಜ್, ಕವನ್ ಕೊತ್ತೋಳಿ,ಅರ್ಜುನ್,ಶರಣ್,ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಗ್ರಾಮಸ್ಥರ ಪರವಾಗಿ ಡಾ ಮಂತರ್ ಗೌಡ ರವರನ್ನು ಭರಪೂರ ಅನುದಾನ ನೀಡಿದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0