Kodagu

ಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಡಾ ಮಂತರ್ ಗೌಡ ರವರಿಂದ ಚಾಲನೆ

admincoorgdaily

ಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಡಾ ಮಂತರ್ ಗೌಡ ರವರಿಂದ ಚಾಲನೆ

ಮಡಿಕೇರಿ; ತಾಲೂಕಿನ ಮಕ್ಕಂದೂರು ಹೆಮ್ಮೆತಾಳು ಪರಿಶಿಷ್ಟ ಪಂಗಡದ ಕಾಲೋನಿಗೆ 10 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು.

ಮಕ್ಕಂದೂರು ಗಾಳೀಬೀಡು ಮಾದಾಪುರ ಶಾಂತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ವಿಭಿನ್ನವಾಗಿದ್ದು ಮುಖ್ಯ ರಸ್ತೆಯಿಂದ ದೂರದಲ್ಲಿ ಒಂದೊಂದು ಮನೆಗಳು ಇದ್ದು ರಸ್ತೆ ಮತ್ತು ವಿದ್ಯುತ್ ಸೌಕರ್ಯ ಗಳ ಸಮಸ್ಯೆಗಳನ್ನು ಅತಿಯಾಗಿ ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು ಇವುಗಳ ಪರಿಹಾರಕ್ಕೆ ವಿಶೇಷ ಕಾಳಜಿವಹಿಸಲಾಗುವುದು ಎಂದು ಮಂತರ್ ಗೌಡ ರವರು ತಿಳಿಸಿದರು.

 ಕುಗ್ರಾಮಗಳನ್ನು ಸುಗ್ರಾಮವಾಗಿ ಪರಿವರ್ತಿಸುವ ಭರವಸೆಯನ್ನು ಚುನಾವಣಾ ಪೂರ್ವದಲ್ಲಿ ನೀಡಿದ್ದು ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ನಿಕಟಪೂರ್ವ ಪಂಚಾಯತ್ ಸದಸ್ಯರಾದ ಕನ್ನಿಗಂಡ ಶ್ಯಾಮ್ , ಗಣೇಶ್ ಪ್ರಮುಖರಾದ ರವೂಫ್ ಶೇಖ್, ವಿ.ಜಿ.ಮೋಹನ್,ಕೋಚನ ಹರಿಪ್ರಸಾದ್,ಮುದ್ದುರಾಜ್,ಶರಣ್ ಸೇರಿದಂತೆ ಗ್ರಾಮ ಪಂಚಾಯತ್ ಪಿ.ಡಿ.ಒ ,ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.