ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ - ಡಿವೈಎಸ್ಪಿ ಚಂದ್ರಶೇಖರ್ ಬಣ್ಣನೆ; ಸಿದ್ದಗಂಗಾ ಭಕ್ತ ಮಂಡಳಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣೆ

Jan 19, 2026 - 13:05
 0  246
ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ - ಡಿವೈಎಸ್ಪಿ ಚಂದ್ರಶೇಖರ್ ಬಣ್ಣನೆ; ಸಿದ್ದಗಂಗಾ ಭಕ್ತ ಮಂಡಳಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣೆ

ಕುಶಾಲನಗರ : ಈ ಶತಮಾನ ಕಂಡ ಕಾಯಕ ಯೋಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ. ಬಡವರು ದೀನರು ಶೋಷಿತರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಆರದ ಹಣತೆಯಾಗಿ ಬೆಳಗುತ್ತಿರುವ ಮಹಾಜ್ಯೋತಿ ಎಂದು ಸೋಮವಾರಪೇಟೆ - ಕುಶಾಲನಗರ ಅವಳಿ ತಾಲ್ಲೂಕುಗಳ ಪೋಲಿಸ್ ಉಪ ಅಧೀಕ್ಷಕ ( ಡಿವೈಎಸ್ಪಿ) ಚಂದ್ರಶೇಖರ್ ಬಣ್ಣಿಸಿದರು.

ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿಯವರ ಭಕ್ತಿ ಸ್ಮರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಡೆದಾಡಿದ ದೇವರು ಭಕ್ತಜನಕ್ಕೆ ಸಾರಿದ ನೀತಿಯ ಸಂದೇಶಗಳನ್ನು ಎಲ್ಲರೂ ತಪ್ಪದೇ ಪಾಲಿಸುವ ಮೂಲಕ ಅತ್ಯುತ್ತಮ ವಾದ ಜೀವನ ಕಟ್ಟಿಕೊಳ್ಳುವಂತೆ ಕರೆಕೊಟ್ಟರು.

ಸಿದ್ದಗಂಗಾ ಭಕ್ತಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದಲೂ ಎಲ್ಲಾ ಜಾತಿ ಹಾಗೂ ಸಮುದಾಯಗಳ ಭಕ್ತಜನರೊಂದಿಗೆ ಕುಶಾಲನಗರದ ವಿವಿಧೆಡೆಗಳಲ್ಲಿ ಶ್ರೀಗಳ ಭಕ್ತಿಯ ಸ್ಮರಣೆ ಆಚರಿಸುತ್ತಾ ಸಮಾಜದ ಸಾಧಕರನ್ನು ಶ್ರೀಗಳ ಹೆಸರಿನಲ್ಲಿ ಗೌರವಿಸಲಾಗುತ್ತಿದೆ ಎಂದರು.

ಸಿದ್ದಗಂಗಾ ಮಠದ ವಿದ್ಯಾರ್ಥಿಯೂ ಆದ ಶಿಕ್ಷಕ ಹುಲುಸೆ ಬಸವರಾಜು ಡಾ.ಶಿವಕುಮಾರ ಸ್ವಾಮೀಜಿ ಗಳ ಜೀವನ ಸಾಧನೆಗಳ ಕುರಿತು ಮಾತನಾಡಿದರು.ತುಮಕೂರು ಮೂಲದವರಾದ ತಾಲ್ಲೂಕು ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್, ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಎಸ್.ನಂದೀಶ್, ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಾಂಬಶಿವಯ್ಯ ಅವರಿಗೆ ಶ್ರೀಗಳ ಭಾವಚಿತ್ರದೊಂದಿಗೆ ಗೌರವಿಸಲಾಯಿತು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್,ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, 

ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಪ್ರಮುಖರಾದ ಸುಶೀಲಾ ಪುಟ್ಟರಾಜು, ವೇದಾವತಿ, ಡಾ.ದೀಪಿಕಾ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ನಾಗರಾಜು, ಸಾಹಿತಿ ಬಿ.ಆರ್.ನಾರಾಯಣ, ನಿವೃತ್ತ ಕಂದಾಯ ಅಧಿಕಾರಿ ಎಂ.ಬಿ.ಬಸವರಾಜು, ಮಾಜಿ ಯೋಧರಾದ ಹವಾಲ್ದಾರ್ ಜನಾರ್ಧನ್, ಜಿ.ಕೆ.ದಿನೇಶ್ ಕುಮಾರ್, ಧಾರ್ಮಿಕ ಸೇವಾ ಮುಖಂಡ ಚಂದ್ರು, ಜಮೀನ್ದಾರ್ ಮಂಜುನಾಥ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0