ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

ಕೂಡಿಗೆ, ಅ. 21: ಸೋಮವಾರಪೇಟೆ ಕಡೆಯಿಂದ ಕೂಡಿಗೆಗೆ ಬರುತ್ತಿದ ಕಾರು ಚಾಲಕ ನಿಯಂತ್ರಣ ತಪ್ಪಿ ಹುದುಗೂರು ಸಮೀಪದಲ್ಲಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿತಗೊಂಡು ಚಾಲಕ ಅಪಾಯದಿಂದ ಪಾರಾದ ಘಟನೆ ಹುದುಗೂರು ಗ್ರಾಮದಲ್ಲಿ ನಡೆದಿದೆ.

ಕಾರು ವಿದ್ಯುತ್ ಕಂಬಕ್ಕೆ ಹೊಡೆದ ಪರಿಣಾಮ ಕಂಬ ತಂಡಾಗಿ ಕಾರು ರಸ್ತೆಯ ಬದಿ ಚರಂಡಿಕ್ಕೆ ಇಲ್ಲಿದಿದೆ,ಚಾಲಕ ಜೋಯಪ್ಪನವರಿಗೆ ಯಾವುದೇ ರೀತಿಯ ತೊಂದರೆಗಳು ಅಗಿರುವುದಲ್ಲಾ, ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಡಿಕ್ಕಿಯಾದ ಕಾರನ್ನು ಎತ್ತಿ ರಕ್ಷಣೆ ಮಾಡಲಾಗಿದೆ.