ಡ್ರಗ್ಸ್ ದಂಧೆ: 3ವರ್ಷಗಳಲ್ಲಿ ಎಷ್ಟು ವಿದೇಶಿ ಪ್ರಜೆಗಳು ಬಂಧನವಾಗಿದ್ದಾರೆ ಗೊತ್ತೇ!

Aug 22, 2025 - 11:26
Aug 22, 2025 - 11:31
 0  102
ಡ್ರಗ್ಸ್ ದಂಧೆ: 3ವರ್ಷಗಳಲ್ಲಿ ಎಷ್ಟು ವಿದೇಶಿ ಪ್ರಜೆಗಳು ಬಂಧನವಾಗಿದ್ದಾರೆ ಗೊತ್ತೇ!

ಬೆಂಗಳೂರು: ಮೂರು ವರ್ಷಗಳ ಅವಧಿಯಲ್ಲಿ ಡ್ರಗ್ಸ್ ದಂಧೆ ಯಲ್ಲಿ ತೊಡಗಿದ್ದ 318 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಈ ಪೈಕಿ 200 ಮಂದಿಯನ್ನು ದೇಶದಿಂದ ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಗುರುವಾರ ಪರಿಷತ್‌ನ ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‌ಡಿಪಿಎಸ್ ಅಡಿಯಲ್ಲಿ ಮೂರು ವರ್ಷಗಳಲ್ಲಿ 14,485 ಪ್ರಕರಣ ದಾಖಲಿಸಿಕೊಳ್ಳಲಾಗದೆ ಈ ಪೈಕಿ 5,304 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಬಾಕಿ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ವೈಜ್ಞಾನಿಕ ಸಾಕ್ಷಿಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ವಿಫಲವಾಗುತ್ತಿವೆ ಎಂದು ಅವರು ಹೇಳಿದರು.

ಡ್ರಗ್ಸ್ ಜಾಲದ ವಿರುದ್ಧ ನಿರಂತರವಾಗಿ ಸಮರ ಸಾರಿದ್ದು, ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ರಾಜ್ಯ ಸರಕಾರದ ಗುರಿಯಾಗಿದೆ ಕ್ಯಾಂಪೇನ್ ಮೂಲಕ 15 ಲಕ್ಷ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ. ಡ್ರಗ್ಸ್ ಪ್ರಕರಣಗಳನ್ನು ಭೇದಿಸಲು ಪ್ರತ್ಯೇಕವಾಗಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೊ ಸ್ಥಾಪಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0