KSRTC ಬಸ್ಸ್ ನಲ್ಲಿ ಕುಡುಕರಿಬ್ಬರ ಎಣ್ಣೆ ಪಾರ್ಟಿ

KSRTC ಬಸ್ಸ್ ನಲ್ಲಿ ಕುಡುಕರಿಬ್ಬರ ಎಣ್ಣೆ ಪಾರ್ಟಿ

ಕುಶಾಲನಗರ: ಕುಡುಕರಿಬ್ಬರು KSRTC ಬಸ್ ನಲ್ಲಿ ರಾಜಾರೋಷವಾಗಿ ಮದ್ಯ ಸೇವಿಸಿಕೊಂಡು ಪ್ರಯಾಣಿಸಿರುವ ಘಟನೆ ನಡೆದಿದೆ. ಬುಧವಾರ ರಾತ್ರಿ ಕುಶಾಲನಗರದಿಂದ ಮೈಸೂರಿಗೆ ತೆರಳುತ್ತಿದ್ದ KSRTC ಬಸ್ ನಲ್ಲಿ ಈ ಕುಡುಕರ ಅವಾಂತರ ಕಂಡುಬಂದಿದ್ದು, ಸಹ ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಬಸ್ ಗಳಲ್ಲಿ ಮದ್ಯಪಾನ ಅಥವಾ ಧೂಮಪಾನ ಮಾಡುವಂತಿಲ್ಲ. ಆದರೂ ಈ ಕುಡುಕರು ಬಸ್ಸಿನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಇತರೆ ಪ್ರಯಾಣಿಕರಿದ್ದರೂ ಕೂಡ ಕ್ಯಾರೇ ಮಾಡದೇ ಕೈಯಲ್ಲಿ ಗ್ಲಾಸ್ ಹಿಡಿದು ಮದ್ಯ ಸೇವಿಸುತ್ತಿದ್ದುದು ಕಂಡು ಬಂದಿದೆ.