ದಸರಾ ದಶಮಂಟಪದ ಜವಾಬ್ದಾರಿ ಹಸ್ತಾಂತರ: 2026-27ನೇ ಸಾಲಿನ ಅಧಿಕಾರವನ್ನು ಶ್ರೀ ಕರಾವಳಿ ಭಗವತಿ ದೇವಾಲಯದ ಸಮಿತಿಗೆ ಹಸ್ತಾಂತರಿಸಿದ ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ

Aug 17, 2026 - 11:31
 0  1

ಮಡಿಕೇರಿ: ಶ್ರೀ ಕೋಟಿ ಮಹಾಗಣಪತಿ ದಸರಾ ದಶಮಂಟಪ ಸಮಿತಿ 2025-26ನೇ ಸಾಲಿನ ವತಿಯಿಂದ 2026-27ನೇ ಸಾಲಿನ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಶ್ರೀ ಕೋಟೆ ಮಹಾಗಣಪತಿ ದೇವಾಲಯದ ಆವರಣದಲ್ಲಿ ಕೋಟೆ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಈ ಬಾರಿ ದಶಮಂಟಪದ ಜವಾಬ್ದಾರಿಯನ್ನು ಶ್ರೀ ಕರಾವಳಿ ಭಗವತಿ ದೇವಾಲಯದಿಂದ ಆಯ್ಕೆಯಾದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ 2025-26ನೇ ಸಾಲಿನ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಅವರು, ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ದೇವಾಲಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ 2026-27ನೇ ಸಾಲಿನ ದಶಮಂಟಪ ಸಮಿತಿಯ ಅಧ್ಯಕ್ಷರಾದ ಸಜನ್ ಪೂಣಚ್ಚ ಅವರಿಗೆ ಎಲ್ಲಾ ದಾಖಲೆಗಳನ್ನೊಳಗೊಂಡ ಫೈಲ್ ಅನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ್ ಶೈನಿ, ಸದಸ್ಯೆ ಸವಿತಾ ರಾಕೇಶ್, ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೋಟೆ ಗಣಪತಿ ಸಮಿತಿ ಅಧ್ಯಕ್ಷ ಶರಣು ಪೂಣಚ್ಚ, ಉಮೇಶ್ ಸುಬ್ರಮಣಿ, ಸತೀಶ್ ಶೆಟ್, ಚಂದ್ರಶೇಖರ್, ಪುನೀತ್, ರಾಜೇಶ್ ಬಿ.ಎಂ, ಸವಿತಾ ಅರುಣ್, ಸಂತೋಷ್ ಅನ್ವೇಕರ್, ಗುರುಕಿರಣ್ ಬಿ.ಪಿ, ಮನೋಹರ್, ಸುಮೇಶ್, ಎಸ್.ಎ. ವಿನಾಯಕ್, ಸಾತ್ವಿಕ್, ಲೋಚನ್ ಅನ್ವೇಕರ್, ಉಮೇಶ್ ಉಪಸ್ಥಿತರಿದ್ದರು.

ಹಾಗೆಯೇ ಶ್ರೀ ಕರಾವಳಿ ಭಗವತಿ ದೇವಾಲಯದ ದಶಮಂಟಪ ಸಮಿತಿಯ ಪದಾಧಿಕಾರಿಗಳಾದ ಡಿನ್ ಬೋಪಣ್ಣ, ಸಚಿನ್ ಕರಿಯಪ್ಪ, ಜಗದೀಶ್ ರೈ, ಆಕಾಶ್ ಭಂಡಾರಿ, ರವಿನ್ ಮಚಯ್ಯ, ಅಚ್ಚಯ್ಯ, ದರ್ಶನ್, ಕುಶಾ, ಕಂಚಿ ಕಾಮಾಕ್ಷಿ ದೇವಸ್ಥಾನದ ಗಿರೀಶ್, ಪ್ರಶಾಂತ್, ದಂಡಿನ ಮಾರಿಯಮ್ಮ ದೇವಾಲಯದ ನಾಗರಾಜ್, ಚೌಡೇಶ್ವರಿ ದೇವಾಲಯದ ಡಿ.ಪಿ. ನಾಗೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0