ಶೈಕ್ಷಣಿಕ,ಸಾಮಾಜಿಕ ಸಮೀಕ್ಷೆ: ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾದ ಶಿಕ್ಷಕರು
ವಿರಾಜಪೇಟೆ: ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ವಿರಾಜಪೇಟೆ ಕ್ಷೇತ್ರದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢ ಶಾಲೆ ಶಿಕ್ಷಕರು,ಇತರ ಇಲಾಖೆ ಸಿಬ್ಬಂದಿಗಳು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಭೇಟಿಯಾಗಿ ಚರ್ಚಿಸಿದರು.
ವಿಶೇಷವಾಗಿ, ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷಕರು ಅನುಭವಿಸುತ್ತಿರುವ ತೊಡಕುಗಳನ್ನು ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಎಲ್ಲವನ್ನು ಆಲಿಸಿದ ಮಾನ್ಯ ಶಾಸಕರು, ಅಗತ್ಯ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.