ಕೊಡಗು ವಿದ್ಯಾಲಯದಲ್ಲಿ ಈದ್ ಮಿಲಾದ್ ಆಚರಣೆ

Sep 1, 2026 - 19:22
 0  115
ಕೊಡಗು ವಿದ್ಯಾಲಯದಲ್ಲಿ ಈದ್ ಮಿಲಾದ್ ಆಚರಣೆ

ಮಡಿಕೇರಿ. ಸೆ. 1-.ನಗರದ ಕೊಡಗು ವಿದ್ಯಾಲಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್ ಕಾರ್ಯಕ್ರಮ ಆಚರಿಸಲಾಯಿತು. ಈದ್ ಮಿಲಾದ್‌ನ ಮಹತ್ವ ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳ ಕುರಿತು ಸುದೀಪ್ತ ಬೆಳ್ಳಿಯಪ್ಪ ಕೆ. ಮಾತನಾಡಿದರು.

ಶಿಕ್ಷಕಿ ಶಹೀರಾ ಮಾತನಾಡಿ ದಯೆ, ಸಹಾನುಭೂತಿ, ಸೌಹಾರ್ದತೆ, ಪೋಷಕರು ಹಾಗೂ ಶಿಕ್ಷಕರಿಗೆ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ 6 ನೇ ತರಗತಿಯ ವಿದ್ಯಾರ್ಥಿಗಳು ಗುಂಪು ಗಾಯನ, ದಫ್ ಹಾಗೂ ಕವ್ವಾಲಿ ನೃತ್ಯ-ಸಂಗೀತವನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

 ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಎಲ್ಲರಿಗೂ ಗೌರವ ನೀಡುವಂತಹ ಉತ್ತಮ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ಆಡಳಿತ ಮುಖ್ಯಸ್ಥ ರವಿ ಪಿ. ಉಪಸ್ಥಿತರಿದರು. ಅಮೃತ ನೀಲಮ್ಮ ಹಾಗೂ ಆಂಡ್ರಿಯಾ ಫೆರ್ನಾಂಡಿಸ್ ನಿರೂಪಿಸಿ, ಎಂ. ದಕ್ಷಿಕಾ ಬೋಪಣ್ಣ ಸ್ವಾಗತಿಸಿದರು. ಮೋನಾಲಿ ಪ್ರಸಾದ್ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0